Tuesday, August 25, 2026

BDA Apartments

Home Cinema ಮತ್ತೆ ಶುರು ಕೆಜಿಎಫ್, ಟಗರು ಹವಾ !

ಮತ್ತೆ ಶುರು ಕೆಜಿಎಫ್, ಟಗರು ಹವಾ !

ಬೆಂಗಳೂರು, ಅಕ್ಟೋಬರ್ 24, 2020 (www.justkannada.in): ಲಾಕ್ ಡೌನ್ ಗೂ ಮುನ್ನ ಪ್ರದರ್ಶನಗೊಳ್ಳುತ್ತಿದ್ದ ಚಿತ್ರಗಳು ಮತ್ತೆ ಬಿಡುಗಡೆಗೊಂಡು ಪ್ರದರ್ಶಿತವಾಗುತ್ತಿವೆ.

ದಿಯಾ, ಲವ್ ಮಾಕ್ಟೇಲ್, ಶಿವಾರ್ಜುನ ಸಿನಿಮಾಗಳು ಸೇರಿದಂತೆ ಸಾಕಷ್ಟು ಸಿನಿಮಾಗಳು ಮತ್ತೆ ಬೆಳ್ಳಿ ಪರದೆ ಮೇಲೆ ಮಿಂಚುತ್ತಿವೆ,

ಬ್ಲಾಕ್ ಬಸ್ಟರ್ ಕೆಜಿಎಫ್-1 ಹಾಗೂ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಭಿನಯದ ಟಗರು ಚಿತ್ರ ಕೂಡ ರೀ ರಿಲೀಸ್ ಆಗಿದೆ. ಕೆಜಿಎಫ್-1 ಸಿನಿಮಾ ಐನಾಕ್ಸ್, ಪಿವಿಆರ್, ಸಿನಿಪೊಲಿಸ್, ಮೈಸೂರಿನ ಡಿಆರ್ ಸಿ ಸಿನಿಮಾಸ್ ಸೇರಿದಂತೆ ಹಲವು ಮಲ್ಟಿ ಪ್ಲೆಕ್ಸ್ ಹಾಗೂ ಥಿಯೇಟರ್ ಗಳಲ್ಲಿ ಸಿನಿಮಾ ಪ್ರದರ್ಶನವಾಗುತ್ತಿದೆ. ರಾಜ್ಯದಲ್ಲಿ ಮಾತ್ರವಲ್ಲದೆ ದೇಶದಾದ್ಯಂತ ರೀ ರಿಲೀಸ್ ಆಗಿದೆ.

2019ನೇ ಸಾಲಿನ ಅಮೆಜಾನ್ ಪ್ರೈಮ್ ನಲ್ಲೂ ಅತಿ ಹೆಚ್ಚು ಜನರು ವೀಕ್ಷಿಸಿದ ಭಾರತ ಸಿನಿಮಾ ಎಂಬ ಕೀರ್ತಿಗೂ ಪಾತ್ರವಾಗಿದ್ದ ಕೆಜಿಎಫ್ ಚಾಪ್ಟರ್ 1 ಪಾತ್ರವಾಗಿತ್ತು.