ಮತ್ತೆ ‘ದಸರಾ’ ಶುರು: ಸಂಭ್ರಮ ಹಂಚಿಕೊಂಡ ಶರ್ಮಿಳಾ ಮಾಂಡ್ರೆ

ಬೆಂಗಳೂರು, ಅಕ್ಟೋಬರ್ 24, 2020 (www.justkannada.in): ಶರ್ಮಿಳಾ ಮಾಂಡ್ರೆ ಅಭಿನಯದ ದಸರಾ ‘ಚಿತ್ರದ ಶೀರ್ಷಿಕೆಗೆ ತಕ್ಕಂತೆ ಶೂಟಿಂಗ್‌ ದಸರಾ ವೇಳೆಯಲ್ಲೇ ಪುನರಾರಂಭಗೊಂಡಿದೆ.

ಚಿತ್ರದ ನಾಯಕ ನಟ ನೀನಾಸಂ ಸತೀಶ್‌ ಕೂಡಾ ತಂಡವನ್ನು ಶೀಘ್ರ ಸೇರಿದ್ದಾರೆ. ಬೆಂಗಳೂರಿನಲ್ಲಿ ಈ ಬಗ್ಗೆ ಸ್ವತಃ ಮಾಂಡ್ರೆ ಅವರೇ ಈ ಸಂತಸ ಹಂಚಿಕೊಂಡಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ ಚಿತ್ರೀಕರಣ ಸ್ಥಗಿತಗೊಂಡಿತ್ತು. ಲಂಡನ್‌ನಲ್ಲಿ ಶೂಟಿಂಗ್‌ ನಡೆಸುತ್ತಿದ್ದ ತಂಡ ಕೋವಿಡ್‌ ಕಾರಣಕ್ಕೆ ತನ್ನ ಚಟುವಟಿಕೆ ಸ್ಥಗಿತಗೊಳಿಸಿತ್ತು.
ಈಗ ನಿಗದಿಯಾಗಿರುವುದು ಚಿತ್ರದ ಥ್ರಿಲ್ಲರ್‌ ಭಾಗದ ಚಿತ್ರೀಕರಣ. ಚಿತ್ರವನ್ನು ಅರವಿಂದ ಶಾಸ್ತ್ರಿ ನಿರ್ದೇಶಿಸುತ್ತಿದ್ದಾರೆ.