ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡ್ರು ಬದ್ಧ: ಮೈಸೂರು ಮೇಯರ್ ಚುನಾವಣೆ ಕುರಿತು ಶಾಸಕ ಎಸ್.ಎ ರಾಮದಾಸ್ ಪ್ರತಿಕ್ರಿಯಿಸಿದ್ದು ಹೀಗೆ…

ಮೈಸೂರು,ಜ,16,2020(www.justkannada.in):  ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಯಾವುದೆ ಕಗ್ಗಂಟಿಲ್ಲ. ಸಂಪುಟ ರಚನೆಯಲ್ಲಿ ಇದೊಂದು ಸ್ಪರ್ಧೆ ಇರುವಂತಹ ಜಾಗ. ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಬಗ್ಗೆ ನಿರ್ಧರ ಮಾಡಿವೆ. ನಾವೇಲ್ಲ ಅದಕ್ಕೆ ಬದ್ಧರಾಗಿರುತ್ತೇವೆ ಎಂದು ಶಾಸಕ ಎಸ್.ಎ ರಾಮದಾಸ್ ತಿಳಿಸಿದರು.

ಮೈಸೂರಿನಲ್ಲಿ ಈ ಬಗ್ಗೆ ಮಾತನಾಡಿದ  ಶಾಸಕ ಎಸ್.ಎ.ರಾಮದಾಸ್, ಎಲ್ಲಿ ಸೈಲೆಂಟ್ ಆಗಿ ಕೆಲಸ ಮಾಡುತ್ತಾರೋ ಅಲ್ಲಿ ಸಾಮರಸ್ಯ ಕಾಣುತ್ತೇವೆ. ಸಂಪುಟದಲ್ಲಿರಲು ಆಪೇಕ್ಷೆ ಪಡುವವರು ಹೇಳಿಕೆ ನೀಡೋದರಲ್ಲಿ ತಪ್ಪೆನಿಲ್ಲ. ಸಿಎಂ ಯಡಿಯೂರಪ್ಪ ನವರು ಸ್ವತಂತ್ರರು, ಅವರು ನಮ್ಮ ತಂದೆ ಸ್ಥಾನದಲ್ಲಿದ್ದಾರೆ. ಅವರು ಯಾವುದೇ ನಿರ್ಧಾರ ತಗೆದುಕೊಂಡರು ನಾವು ಬದ್ಧರಾಗಿರುತ್ತೇವೆ ಎಂದು ತಿಳಿಸಿದರು.

ಬಿಜೆಪಿಯಂತಹ ಹಾಲಿನ ವಾತಾವರಣದಲ್ಲಿ ಹೆಚ್. ವಿಶ್ವನಾಥ್ ಸಕ್ಕರೆಯಂತೆ ಕರಗಿ ನಮ್ಮ ಜೊತೆ ಇರುತ್ತಾರೆ….

ಸಚಿವ ಸಂಪುಟ ರಚನೆ ವಿಚಾರ ಕುರಿತು ಹೆಚ್. ವಿಶ್ವನಾಥ್ ಎಚ್ಚರಿಕೆ ಕೊಟ್ಟ  ಕುರಿತು ಪ್ರತಿಕ್ರಿಯಿಸಿದ ರಾಮದಾಸ್, ವಿಶ್ವನಾಥ್ ನಮ್ಮ ತಂದೆಯ ಸ್ಥಾನದಲ್ಲಿದ್ದಾರೆ. ಅವರು ಎಲ್ಲಾ  ಪಕ್ಷದಲ್ಲಿಯೂ ಆಡಳಿತ ವ್ಯವಸ್ಥೆಗಳನ್ನು ತಿಳಿದುಕೊಂಡಿದ್ದಾರೆ. ಅವರು ಯಾವ ದೃಷ್ಟಿಯಲ್ಲಿ ಈ ರೀತಿ ಹೇಳಿದ್ದಾರೆ ಗೊತ್ತಿಲ್ಲ ಎಂದರು.

ಬಿಜೆಪಿ ತತ್ವ ಸಿದ್ದಾಂತಗಳನ್ನು ಹೊಂದಿರುವ ಪಕ್ಷ. ಸರ್ಕಾರಕ್ಕಿಂತ ಪಕ್ಷ ಮುಖ್ಯ ಪಕ್ಷಕ್ಕಿಂತ ದೇಶ ಮುಖ್ಯ ಎನ್ನುವ ಪಕ್ಷ. ನಾವು ಪಕ್ಷದ ಬಗ್ಗೆ ಚಿಂತೆ ಮಾಡುತ್ತೇವೆ. ಹಿರಿಯರ ಕಾಮೆಂಟ್ ಗೆ ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇಲ್ಲ. ಈ ಬಗ್ಗೆ ವಿಶ್ವನಾಥ್ ರವರ ಜೊತೆ ಸಿಎಂ ಮಾತನಾಡುತ್ತಾರೆ. ನಮ್ಮ‌ ಪಕ್ಷದ ಬೇಸ್ ತುಂಬಾ ದೊಡ್ಡದಾಗಿದೆ. ಬೇಸ್ ತುಂಬಾ ದೊಡ್ಡದಾಗಿರುವ ಕಾರಣ ಶಿಥಿಲವಾಗುವುದಿಲ್ಲ. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಶಕ್ತಿಯುತವಾಗಿದೆ. ಹಾಗಾಗಿ ಎಲ್ಲರನ್ನೂ ಕನ್ವಿನ್ಸ್ ಮಾಡುವ ಶಕ್ತಿ ನಮ್ಮಲ್ಲಿದೆ. ಅಂತಹ ಬೆಳವಣಿಗೆಯಾದರೆ ಅದನ್ನು ಜೀರ್ಣಿಸಿಕೊಳ್ಳುವ ಶಕ್ತಿ ನಮಗಿದೆ.  ಬಿಜೆಪಿಯಂತಹ ಹಾಲಿನ ವಾತಾವರಣದಲ್ಲಿ, ವಿಶ್ವನಾಥ್ ಸಕ್ಕರೆಯಂತೆ ಕರಗಿ ನಮ್ಮ ಜೊತೆ ಇರುತ್ತಾರೆ ಎಂದು ರಾಮದಾಸ್ ಹೇಳಿದರು.

ಮೇಯರ್ ಗಾದಿ ಹಿಡಿಯಲು ನಾವು ಯಾವತ್ತು ಹಿಂಬದಿಯಿಂದ ಪ್ರಯತ್ನ ಮಾಡಿಲ್ಲ.

ಮೈಸೂರು ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ಎಸ್.ಎ ರಾಮದಾಸ್,  ಮೇಯರ್ ಗಾದಿ ಹಿಡಿಯಲು ನಾವು ಯಾವತ್ತು ಹಿಂಬದಿಯಿಂದ ಪ್ರಯತ್ನ ಮಾಡಿಲ್ಲ. ಆಪರೇಷನ್ ಕಮಲಾನೂ ಮಾಡಲ್ಲ. ಕಾಂಗ್ರೆಸ್, ಜೆಡಿಎಸ್ ಕೂಡಾ ಈ ಬಾರಿ ಕೂಡಾ ಮೈತ್ರಿ ಮುಂದುವರೆದಿದೆ. ಅವರಲ್ಲಿಯೇ ಇರುವ ಸಮಸ್ಯೆಗಳಿಂದ ರೆಸಾರ್ಟ್ ಗೆ ಹೋಗುತ್ತಿದ್ದಾರೆ. ನಾವು ಆಪರೇಷನ್ ಕಮಲ ಮಾತುತ್ತಿಲ್ಲ, ಮಾಡೋದು ಇಲ್ಲ ಎಂದು ಸ್ಪಷ್ಟನೆ ನೀಡಿದರು.

ನಾವು ವಿರೋಧ ಪಕ್ಷದಲ್ಲಿಯೇ ಉಳಿಯುತ್ತೇವೆ. ಸಕಾರಾತ್ಮಕ ಆಡಳಿತಕ್ಕೆ ನಾವು ಬದ್ಧರಾಗಿದ್ದೇವೆ. ನಾವು ಯಾವ ರೀತಿ ಇರಬೇಕೆಂಬುದನ್ನ  ನಿರ್ಧರಿಸಲು  ನ.17 ರಂದು ಸಭೆ ಕರೆದಿದ್ದೇವೆ. ಸಭೆಯಲ್ಲಿ ವಿಶೇಷವಾಗಿ ಜವಬ್ದಾರಿ ನೀಡುವುದಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

Key words: any decision – cabinet Expansion-MLA-SA Ramdas –mysore mayor- election.