Wednesday, August 12, 2026

BDA Apartments

Home Front Page ಹೆಚ್ ಡಿ ದೇವೇಗೌಡರದ್ದು ಹೆಗ್ಗಣ ಕುಟುಂಬ: ಕಾಂಗ್ರೆಸ್ ಮಂತ್ರಿಗಳು ಶಕ್ತಿಹೀನರು ಎಂದು ಲೇವಡಿ ಮಾಡಿದ ಮಾಜಿ...

ಹೆಚ್ ಡಿ ದೇವೇಗೌಡರದ್ದು ಹೆಗ್ಗಣ ಕುಟುಂಬ: ಕಾಂಗ್ರೆಸ್ ಮಂತ್ರಿಗಳು ಶಕ್ತಿಹೀನರು ಎಂದು ಲೇವಡಿ ಮಾಡಿದ ಮಾಜಿ ಶಾಸಕ ಕೆ.ಎನ್ ರಾಜಣ್ಣ..

ತುಮಕೂರು,ಮೇ,11,2019(www.justkannada.in):  ರಾಜ್ಯದಲ್ಲಿ ದೋಸ್ತಿ ಸರ್ಕಾರ ಅಲ್ಲ. ಜೆಡಿಎಸ್ ಸರ್ಕಾರವಿದೆ. ಕಾಂಗ್ರೆಸ್ ಮಂತ್ರಿಗಳು ಶಕ್ತಿಹೀನರಾಗಿದ್ದಾರೆ. ಹೆಚ್.ಡಿ ದೇವೇಗೌಡರದ್ದು ಹೆಗ್ಗಣ ಕುಟುಂಬ ಎಂದು ಮಾಜಿ ಶಾಸಕ ಕೆ.ಎನ್ ರಾಜಣ್ಣ ಕಿಡಿಕಾರಿದರು.

ತುಮಕೂರಿನಲ್ಲಿ ಇಂದು ಮಾತನಾಡಿದ ಮಾಜಿ ಶಾಸಕ ಕೆ.ಎನ್ ರಾಜಣ್ಣ, ಹೆಚ್.ಡಿ ದೇವೇಗೌಡರ ಕುಟುಂಬ ದ್ವೇಷದ ರಾಜಕಾರಣಕ್ಕೆ ಹೆಸರುವಾಸಿ. ಕುಟುಂಬದ ಎಲ್ಲರಲ್ಲೂ ಅದು ಕರಗತವಾಗಿದೆ. ಹೆಚ್.ಡಿ ದೇವೇಗೌಡರ ಕುಟುಂಬ ಹೆಗ್ಗಣ ಕಂಪನಿ ಇದ್ದಂತೆ. ಬೇರೆಯವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ನನ್ನ ತಟ್ಟೆಯಲ್ಲಿ ಸೊಳ್ಳೆ ಹುಡುಕುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಅಪೇಕ್ಸ್ ಬ್ಯಾಂಕ್ ತನಿಖೆ ಕುರಿತು ತಿರುಗೇಟು ನೀಡಿದ ಕೆ.ಎನ್ ರಾಜಣ್ಣ, ಚುನಾವಣಾ ದ್ವೇಷದ ಹಿನ್ನೆಲೆ ನನ್ನ ವಿರುದ್ದ ತನಿಖೆಗೆ ಸೂಚಿಸಲಾಗಿದೆ. ತಪ್ಪು ಮಾಡಿದ್ರೆ ಹೆದರಬಹುದು. ತಪ್ಪೆ ಮಾಡದ ಮೇಲೆ ಹೆದರುವ ಪ್ರಶ್ನೆಯೇ ಇಲ್ಲ. ಇದರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ತನಿಖೆ ಮಾಡೋಕೆ ನಾನೇನು ಲೂಟಿ ಮಾಡಿಲ್ಲ. ಕಾನೂನಿನ ಪ್ರಕಾರ ಏನಾದ್ರೂ ಮಾಡಿಕೊಳ್ಳಲಿ ಎಂದು ಹೇಳಿದರು.

ಇನ್ನು ರಾಜ್ಯದಲ್ಲಿ ಜೆಡಿಎಸ್ ಸರ್ಕಾರವಿದೆ ವಿನಹ ಮೈತ್ರಿ ಸರ್ಕಾರವಲ್ಲ. ಈ ಸರ್ಕಾರದಲ್ಲಿ ಕಾಂಗ್ರೆಸ್ ಮಂತ್ರಿಗಳು ಶಕ್ತಿಹೀನರಾಗಿದ್ದಾರೆ ಎಂದು ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದರು.

Key words: HD Devegowda -family – Former MLA -KN Rajanna-ridiculed –Congress- ministers