Sunday, September 27, 2026

BDA Apartments

Home Front Page ನಾಳಿನ ಬಂದ್ ನಿಂದ ಪ್ರಯೋಜನವಿಲ್ಲ: ತೊಂದರೆ ಆಗದಂತೆ ಕ್ರಮ- ಗೃಹ ಸಚಿವ ಪ್ರಿಯಾಂಕ್ ಖರ್ಗೆ

ನಾಳಿನ ಬಂದ್ ನಿಂದ ಪ್ರಯೋಜನವಿಲ್ಲ: ತೊಂದರೆ ಆಗದಂತೆ ಕ್ರಮ- ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು,ಆಗಸ್ಟ್,12,2026 (www.justkannada.in):  ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ ನೀಡಿರುವ ಆದೇಶ ಖಂಡಿಸಿ ನಾಳೇ ಕರೆ ನೀಡಲಾಗಿರುವ ಬಂದ್ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಬಂದ್ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ ಯಾರಿಗೂ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ.  ಕನ್ನಡಿಗರ ಹಿತಾಸಕ್ತಿ ಕಾಪಾಡೋದ ನಮ್ಮ ಕರ್ತವ್ಯ  ನಮ್ಮ ಮನೆಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದರು.ನಾಳಿನ ಬಂದ್ ನಿಂದ ಪ್ರಯೋಜನವಿಲ್ಲ bandh

ನಾನು ಪಕ್ಷದ ಶಿಸ್ತಿನ ಸಿಪಾಯಿ. ಏನೇ ಜವಾಬ್ದಾರಿ ಕೊಟ್ಟರೂ ಅದನ್ನ ನಿರ್ವಹಿಸಲು ನಾನು ಸಿದ್ದನಿದ್ದೇನೆ. ನಾನು ಹೆಚ್ಚುವರಿ ಖಾತೆ ಕೇಳಿಲ್ಲ ಈಗ ಕೊಟ್ಟಿರುವ ಖಾತೆ ನಿಭಾಯಿಸಿದರೇ ಸಾಕಾಗಿದೆ. ನಾನು ಪಕ್ಷದ ಹೈಕಮಾಂಡ್ ಶಿಸ್ತಿನ ಸಿಪಾಯಿ ಪಕ್ಷ ಏನೇ ಜವಾಬ್ದಾರಿ ಕೊಟ್ಟರೂ ನಾವು ಮಾಡುತ್ತೇವೆ. ನನಗೆ ಪಕ್ಷದ ಕೆಲಸ ಕೊಟ್ಟರೂ ಮಾಡುತ್ತೇವೆ ಅದರಲ್ಲಿ ಏನಿದೆ ಎಂದರು.ತೊಂದರೆ ಆಗದಂತೆ ಕ್ರಮ jk02_new jk02 new

Key words:  party, responsibility, Home Minister, Priyank Kharge