Monday, September 28, 2026

BDA Apartments

ಕರ್ನಾಟಕ ಬಂದ್: ವಾಟಾಳ್ ನಾಗರಾಜ್ ವಶಕ್ಕೆ ಪಡೆದ ಪೊಲೀಸರು BDA JK_Adv BDA Adv
Home Front Page ಕರ್ನಾಟಕ ಬಂದ್: ವಾಟಾಳ್ ನಾಗರಾಜ್ ವಶಕ್ಕೆ ಪಡೆದ ಪೊಲೀಸರು

ಕರ್ನಾಟಕ ಬಂದ್: ವಾಟಾಳ್ ನಾಗರಾಜ್ ವಶಕ್ಕೆ ಪಡೆದ ಪೊಲೀಸರು

ಬೆಂಗಳೂರು,ಆಗಸ್ಟ್,13,2026 (www.justkannada.in):  ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಆಗ್ರಹಿಸಿ ಇಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ.

ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನ ವಶಕ್ಕೆ ಪಡೆದಿದ್ದಾರೆ.  ಬೆಂಗಳೂರಿನ ಡಾಲರ್ಸ್ ಕಾಲೋನಿ ನಿವಾಸದ ಬಳಿ ವಾಟಾಳ್ ನಾಗರಾಜ್ ಅವರನ್ನ ಸದಾಶಿವನಗರ  ಪೊಲೀಸರು ವಶಕ್ಕೆ ಪಡೆದಿದ್ದಾರೆ.ಕರ್ನಾಟಕ ಬಂದ್ bandh

ಈ ಮಧ್ಯೆಯೂ ವಾಟಾಳ್ ನಾಗರಾಜ್ ಅವರು ಬಾಯಿಗೆ ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆಗೆ ಮುಂದಾದರು.  ಇಂದು ಕರೆ ನೀಡಿರುವ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಎಂದಿನಂತೆ ಬಸ್ ಆಟೋ ಟ್ಯಾಕ್ಸಿಗಳ ಸಂಚಾರವಿದೆ.ವಾಟಾಳ್ ನಾಗರಾಜ್ ವಶಕ್ಕೆ ಪಡೆದ ಪೊಲೀಸರು jk02_new jk02 new

Key words: Karnataka Bandh, Vatal Nagaraj, custody, police