Friday, November 13, 2026

Dasara Wishes

Happy Dasara
Home Front Page ಆವಿಷ್ಕಾರ ಕ್ಷೇತ್ರದಲ್ಲಿ ಯುವಕರ ಸಾಧನೆ ಮೈಲಿಗಲ್ಲು: ತಂತ್ರಜ್ಞಾನ ಅತಿ ವೇಗದಲ್ಲಿ ಜಗತ್ತನ್ನು ಬದಲಾಯಿಸುತ್ತಿದೆ- ಪ್ರಧಾನಿ ಮೋದಿ

ಆವಿಷ್ಕಾರ ಕ್ಷೇತ್ರದಲ್ಲಿ ಯುವಕರ ಸಾಧನೆ ಮೈಲಿಗಲ್ಲು: ತಂತ್ರಜ್ಞಾನ ಅತಿ ವೇಗದಲ್ಲಿ ಜಗತ್ತನ್ನು ಬದಲಾಯಿಸುತ್ತಿದೆ- ಪ್ರಧಾನಿ ಮೋದಿ

ಆವಿಷ್ಕಾರ ಕ್ಷೇತ್ರದಲ್ಲಿ ಯುವಕರ ಸಾಧನೆ ಮೈಲಿಗಲ್ಲು: ತಂತ್ರಜ್ಞಾನ ಅತಿ ವೇಗದಲ್ಲಿ ಜಗತ್ತನ್ನು ಬದಲಾಯಿಸುತ್ತಿದೆ- ಪ್ರಧಾನಿ ಮೋದಿ

 ಮೈಸೂರು,ನವೆಂಬರ್,13,2026 (www.justkannada.in): ದೇಶದಲ್ಲಿ ಹೆಚ್ಚಿನ ಯುವಕರು ವಿಜ್ಞಾನ ಕ್ಷೇತ್ರದಲ್ಲಿ ತೊಡಗಿದ್ದಾರೆ. ದೇಶದ ಯುವ ವಿಜ್ಞಾನಿಗಳು ರಾಕೆಟ್​ ಉಡಾವಣೆ ಮಾಡುತ್ತಿದ್ದಾರೆ. ಆವಿಷ್ಕಾರ ಕ್ಷೇತ್ರದಲ್ಲಿ ಯುವಕರ ಸಾಧನೆ ಮೈಲಿಗಲ್ಲು ಸೃಷ್ಟಿಸಿದೆ. ತಂತ್ರಜ್ಞಾನವು ಅತಿ ವೇಗದಲ್ಲಿ ಜಗತ್ತನ್ನು ಬದಲಾಯಿಸುತ್ತಿದೆ ಎಂದು ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಸ್ಮೋಸ್ ಮೈಸೂರು ತಾರಾಲಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಮೈಸೂರಿಗೆ ಬಂದಿರುವುದಕ್ಕೆ ನನಗೆ ಬಹಳ ಖುಷಿಯಾಗುತ್ತಿದೆ. ಕೆಲ ತಿಂಗಳ ಹಿಂದೆ ವಿವೇಕಾನಂದರ ಸ್ಮಾರಕ ಉದ್ಘಾಟನೆಗೆ ಬಂದಿದ್ದೆ ಎಂದು ಸ್ಮರಿಸಿದರು.ಮೈಸೂರಿನಲ್ಲಿ COSMOS ತಾರಾಲಯ ಲೋಕರ್ಪಣೆ ಮಾಡಿದ ಪ್ರಧಾನಿ ಮೋದಿ

ಭಾರತದಲ್ಲಿ ವಿಜ್ಞಾನ ಆಧ್ಯಾತ್ಮ ಜೊತೆಜೊತೆಗೆ ಸಾಗಿದೆ. ನಮ್ಮ ಪೂರ್ವಿಕರು ತಾರೆ ಗ್ರಹದ ಗತಿಯನ್ನು ಗುರುತಿಸುತ್ತಿದ್ದರು. ಅವರೇ ಕ್ಯಾಲೆಂಡರ್ ರಚಿಸಿದ್ದರು. ಹಿಂದೆ ಈ ರೀತಿಯ ತಂತ್ರಜ್ಞಾನ ಇರಲಿಲ್ಲ, ಆದರೂ ಅನೇಕ ಸಂಶೋಧನೆ ಮಾಡಿದರು. ದೇಶಕ್ಕೆ ಆರ್ಯಭಟ, ರಾಮಾನುಜನ್ ಅವರ ಕೊಡುಗೆ ಅಪಾರ. ಕಾಸ್ಮೋಸ್ ಮೈಸೂರು ತಾರಾಲಯ ನಿರ್ಮಾಣಕತೃರಿಗೆ ಅಭಿನಂದನೆ. ಇಂದು ತಂತ್ರಜ್ಞಾನವು ಅತಿ ವೇಗದಲ್ಲಿ ಜಗತ್ತನ್ನು ಬದಲಾಯಿಸುತ್ತಿದೆ. ದೇಶದಲ್ಲಿ ಹೆಚ್ಚಿನ ಯುವಕರು ವಿಜ್ಞಾನ ಕ್ಷೇತ್ರದಲ್ಲಿ ತೊಡಗಿದ್ದಾರೆ. ಮೈಸೂರು ಇದಕ್ಕೆಲ್ಲಾ ಉತ್ತಮ ಪ್ರೋತ್ಸಾಹ ನೀಡಿದೆ ಎಂದರು.ಆವಿಷ್ಕಾರ ಕ್ಷೇತ್ರದಲ್ಲಿ ಯುವಕರ ಸಾಧನೆ ಮೈಲಿಗಲ್ಲು: ತಂತ್ರಜ್ಞಾನ ಅತಿ ವೇಗದಲ್ಲಿ ಜಗತ್ತನ್ನು ಬದಲಾಯಿಸುತ್ತಿದೆ- ಪ್ರಧಾನಿ ಮೋದಿ

ಇದೇ ವೇಳೆ  ನಾಲ್ವಡಿ ಕೃಷ್ಣರಾಜ ಒಡೆಯರ್ ಕುಟುಂಬದ ಕೊಡುಗೆ ಬಗ್ಗೆ ಶ್ಲಾಘಿಸಿದ ಪ್ರಧಾನಿ ಮೋದಿ, ರಾಜ ಕುಟುಂಬ ವಿದ್ಯಾರ್ಥಿಗಳು ಹಾಗೂ ಸಂಶೋಧಕರಿಗೆ ಪೋತ್ಸಾಹ‌ ನೀಡಿದೆ. ಮೈಸೂರು ಈ ತಾರಾಲಯದ ಮೂಲಕ ಹೊಸ ಅಧ್ಯಾಯ ಸೇರಿಸಿದೆ. ನಮ್ಮ ವಿದ್ಯಾರ್ಥಿಗಳಿಗೆ ಸಂಶೋಧನೆಗೆ ಬೇಕಾಗಿದ್ದು ಸಿಕ್ಕರೆ ಸಾಧಿಸಿ ತೋರಿಸುತ್ತಾರೆ. ಮೈಸೂರು ಕಾಸ್ಮೋಸ್ ತಾರಾಲಯ ಈ ಕೆಲಸ ಮಾಡಲಿದೆ. ಯಾವುದೇ ದೇಶ ವಿಜ್ಞಾನದಲ್ಲಿ ಹಿಂದೆ ಉಳಿಯಲು ಸಿದ್ಧವಿಲ್ಲ. ನಾವು ಈ ವಿಚಾರದಲ್ಲಿ ಪ್ರಗತಿ ಸಾಧಿಸಿದ್ದೇವೆ ಎಂದು ಸಂತಸ  ವ್ಯಕ್ತಪಡಿಸಿದರು.COSMOS Planetarium jk02_new jk02 new

Mysore, COSMOS Planetarium, Achievements, youth, innovation, Technology, PM, ModiMysore, COSMOS Planetarium,

English Summary
Title

PM Modi Inaugurates COSMOS-Mysuru Planetarium: India's First 8K LED Dome for Space Innovation

Short Description
Prime Minister Narendra Modi inaugurated the state-of-the-art COSMOS-Mysuru Planetarium in Mysuru, Karnataka, marking a major milestone in Indian space technology and scientific innovation. Built at a cost of ₹91 crore on the University of Mysore campus, it is India's first 8K-resolution LED dome planetarium. Developed by the Indian Institute of Astrophysics (IIA), this 15-metre tilted sky theatre replaces traditional projectors with over 4.2 crore LEDs for immersive cosmic visualisations. Designed to empower youth, the centre features a museum and training facilities to inspire students and nurture future researchers in astronomy and cosmology.
Keywords
Mysore, COSMOS Planetarium, Achievements, youth, innovation, Technology, PM, ModiMysore