Thursday, August 13, 2026

BDA Apartments

Home Front Page ಮಹಾರಾಷ್ಟ್ರ ಡ್ರಾಮಾ ಕಂಪನಿ ಆಗಿಬಿಟ್ಟಿದೆ: ರಾಜ್ಯದ ಒಂದಿಂಚೂ ಜಾಗ ಬಿಟ್ಟುಕೊಡಲ್ಲ- ಸಚಿವ ಆರ್.ಅಶೋಕ್.

ಮಹಾರಾಷ್ಟ್ರ ಡ್ರಾಮಾ ಕಂಪನಿ ಆಗಿಬಿಟ್ಟಿದೆ: ರಾಜ್ಯದ ಒಂದಿಂಚೂ ಜಾಗ ಬಿಟ್ಟುಕೊಡಲ್ಲ- ಸಚಿವ ಆರ್.ಅಶೋಕ್.

ಬೆಳಗಾವಿ,ಡಿಸೆಂಬರ್,27,2022(www.justkannada.in): ಗಡಿ ವಿಚಾರದಲ್ಲಿ ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಮಹಾರಾಷ್ಟ್ರದ ವಿರುದ್ಧ ಕಿಡಿಕಾರಿರುವ ಕಂದಾಯ ಸಚಿವ ಆರ್.ಅಶೋಕ್. ಮಹಾರಾಷ್ಟ್ರ ಡ್ರಾಮಾ ಕಂಪನಿ ಆಗಿಬಿಟ್ಟಿದೆ. ರಾಜ್ಯದ ಒಂದಿಂಚೂ ಜಾಗವನ್ನ ಮಹಾರಾಷ್ಟ್ರ ಬಿಟ್ಟುಕೊಡಲ್ಲ ಎಂದು ತಿಳಿಸಿದರು.

ಈ ಕುರಿತು ಮಾತನಾಡಿದ ಸಚಿವ ಆರ್.ಅಶೋಕ್,  ರಾಜ್ಯದ ಒಂದು ಇಂಚು ಜಾಗವನ್ನ ಮಹಾರಾಷ್ಟ್ರಕ್ಕೆ ಬಿಟ್ಟುಕೊಡಲ್ಲ. 1 ಸೆಂಟಿ ಮೀಟರ್ ಜಾಗ ಸಹ ಬಿಟ್ಟು ಕೊಡಲ್ಲ ಇಂಥ ಪ್ರಶ್ನೆ ಬರಲ್ಲ. ಮಹಾರಾಷ್ಟ್ರ ಡ್ರಾಮಾ ಕಂಪನಿ ಆಗಿಬಿಟ್ಟಿದೆ. ಮಹಾರಾಷ್ಟ್ರದ ನಾಯಕರ ಮಾತಿಗೆ ಮೂರು ನಯಾಪೈಸೆ ಕಿಮ್ಮತ್ತಿಲ್ಲ ಚುನಾವಣೆ ಹತ್ತರ ಬಂತು ಅಂತಾ ಅವರು ಖ್ಯಾತೆ ತೆಗೆಯುತ್ತಿದ್ದಾರೆ. ನಮ್ಮ ರಾಷ್ಟ್ರನಾಯಕರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದರು.

Key words: Maharashtra – become -drama company-Minister- R. Ashok