Tuesday, September 29, 2026

BDA Apartments

ಆ.14ರಂದು ಮೈಸೂರಿನಲ್ಲಿ ಪಂಜಿನ ಮೆರವಣಿಗೆ : ಕರಪತ್ರ ನೀಡಿ ಆಹ್ವಾನ BDA JK_Adv BDA Adv
Home Front Page ಆ.14ರಂದು ಮೈಸೂರಿನಲ್ಲಿ ಪಂಜಿನ ಮೆರವಣಿಗೆ : ಕರಪತ್ರ ನೀಡಿ ಆಹ್ವಾನ

ಆ.14ರಂದು ಮೈಸೂರಿನಲ್ಲಿ ಪಂಜಿನ ಮೆರವಣಿಗೆ : ಕರಪತ್ರ ನೀಡಿ ಆಹ್ವಾನ

ಮೈಸೂರು,ಆಗಸ್ಟ್,13,2026 (www.justkannada.in): 79ನೇ ಭಾರತ ಸ್ವಾತಂತ್ರ್ಯೋತ್ಸವ ಹಾಗೂ ಅಖಂಡ ಭಾರತ ಸಂಕಲ್ಪ ದಿನ ಅಂಗವಾಗಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಆಗಸ್ಟ್ 14ರಂದು  ಸಂಜೆ 6 ಗಂಟೆಗೆ ಜಿಲ್ಲಾ ಮಟ್ಟದ  ಪಂಜಿನ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ ನಗರದ ಬಸ್ ನಿಲ್ದಾಣ ಮುಂಭಾಗ ಹಾಗೂ ಜಗನ್ಮೋಹನ ಅರಮನೆಯ ಸುತ್ತಮುತ್ತ ಯುವಕರಿಗೆ ಕರಪತ್ರ ನೀಡಿ ಆಹ್ವಾನ ನೀಡಲಾಯಿತು. ಆಗಸ್ಟ್ 14 ಆಗಸ್ಟ್ 2026 ಶುಕ್ರವಾರ ಸಂಜೆ 6 ಗಂಟೆಗೆ ಹಳೆ ಆರ್‌ಎಂಸಿ ವೃತ್ತದಲ್ಲಿರುವ ಮಹಾ ಗಣಪತಿ ದೇವಸ್ಥಾನದಿಂದ ಪಂಜಿನ ಮೆರವಣಿಗೆ  ಪ್ರಾರಂಭಗೊಂಡು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದವರೆಗೂ ಸಾಗಿ ಮೆರವಣಿಗೆ ಮುಕ್ತಾಯಗೊಳ್ಳುವುದು. ನಂತರ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸಭಾ ಕಾರ್ಯಕ್ರಮದ ದಿಕ್ಸೂಚಿ ಭಾಷಣಕಾರರಾಗಿ ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸಂಚಾಲಕರಾದ ದೋ. ಕೇಶವಮೂರ್ತಿ ನೆರವೇರಿಸಲಿದ್ದಾರೆ

ಪ್ರತಿಯೊಬ್ಬರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಖಂಡ ಭಾರತ ನಿರ್ಮಾಣದ ಸಂಕಲ್ಪ ಮಾಡೋಣ ಬಲಿಷ್ಠ ಹಿಂದೂ ರಾಷ್ಟ್ರ ನಿರ್ಮಾಣದ ಸಂಕಲ್ಪ ಮಾಡೋಣ ಎಂದು ಸಂಘಟನೆಯ ಸಹ ಸಂಯೋಜಕ ಸಂದೇಶ್ ಮನವಿ ಮಾಡಿದರು.ಆ.14ರಂದು ಮೈಸೂರಿನಲ್ಲಿ ಪಂಜಿನ ಮೆರವಣಿಗೆ panju

1947ರ ಆಗಸ್ಟ್ 14ರ ಮಧ್ಯರಾತ್ರಿ ಭಾರತ ದೇಶ ವಿಭಜನೆಗೊಂಡು ಈ ಕರಾಳ ರಾತ್ರಿಯ ದುರಂತವನ್ನು ಇಂದಿನ ಸಮಾಜ ಬಾಂಧವರಲ್ಲಿ ನೆನಪಿಸುವುದು ಮತ್ತು ಕಳೆದು ಹೋಗಿರುವ ಭೂಭಾಗಗಳನ್ನು ಮತ್ತೆ ಒಂದುಗೂಡಿಸುವ ಸಂಕಲ್ಪದೊಂದಿಗೆ ಜಿಲ್ಲಾ ಮಟ್ಟದ ಪಂಜಿನ ಮೆರವಣಿಗೆ ಕಾರ್ಯಕ್ರಮವನ್ನು ದೇಶಾದ್ಯಂತ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.ಕರಪತ್ರ ನೀಡಿ ಆಹ್ವಾನ jk02_new jk02 new

ಈ ಸಂದರ್ಭದಲ್ಲಿ ಮಾಜಿನಗರ ಪಾಲಿಕಾ ಸದಸ್ಯ ಜಗದೀಶ್, ವಿಕ್ರಂ ಅಯ್ಯಂಗಾರ್, ಪ್ರಮೋದ್ ಗೌಡ, ವಕೀಲ ಶಿವರಾಜ್, ಅಭಿಷೇಕ್ ಗೌಡ, ವಸಂತ್ ಕುಮಾರ್, ಚಂದ ಸ್ವಾಮಿ, ಶ್ರೀನಿಧಿ, ಅಜಯ್, ಹಾಗೂ ಇನ್ನಿತರರು ಹಾಜರಿದ್ದರು

 

Key words: Torch procession, Mysore, August 14,  Invitation