ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ಬೃಹತ್ ಸಮಾವೇಶ: ಡಿ.29 ಮತ್ತು 30 ರಂದು ಮಂಡ್ಯ ವಿವಿಗೆ ರಜೆ ಘೋಷಣೆ.

ಮಂಡ್ಯ,ಡಿಸೆಂಬರ್,28,2022(www.justkannada.in):  ಕೇಂದ್ರ ಗೃಹ ಸಚಿವ ಅಮಿತ್ ಶಾ ಡಿಸೆಂಬರ್ 29 ಮತ್ತು 30 ರಂದು ರಾಜ್ಯ ಪ್ರವಾಸ ಕೈಗೊಂಡಿದ್ದು, ಮಂಡ್ಯದಲ್ಲಿ ಬಿಜೆಪಿ ಬೃಹತ್ ಸಮಾವೇಶ ನಡೆಯಲಿದೆ.

ಡಿಸೆಂಬರ್ 29 ರಂದು ಮಂಡ್ಯದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾಲ್ಗೊಳ್ಳಲಿದ್ದು  ಅಂದು ಮಂಡ್ಯ ವಿವಿ ಆವರಣದಲ್ಲಿ ಬಿಜೆಪಿ ಬೃಹತ್ ಸಮಾವೇಶ ನಡೆಯಲಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ  ಡಿಸೆಂಬರ್ 29 ಮತ್ತು 30 ರಂದು ಮಂಡ್ಯ ವಿವಿಗೆ ರಜೆ ಘೋಷಣೆ ಮಾಡಿ ಮಂಡ್ಯ ಜಿಲ್ಲಾಧಿಕಾರಿ ಗೋಪಾಲಕೃಷ್ಣ ಆದೇಶ ಹೊರಡಿಸಿದ್ದಾರೆ.

Key words: Amit Shah -BJP -mega conference- Holiday -announcement – Mandya University on