ಕೊರೋನಾ ವಾರಿಯರ್ಸ್ ಗೆ 2ನೇ ಬೂಸ್ಟರ್ ಡೋಸ್ ನೀಡಲು ಚಿಂತನೆ.

ಬೆಂಗಳೂರು,ಡಿಸೆಂಬರ್,28,2022(www.justkannada.in): ದೇಶದಲ್ಲಿ ಕೋವಿಡ್ ಭೀತಿ ಮತ್ತೆ ಶುರುವಾಗಿದ್ದು ಈ ಹಿನ್ನೆಲೆಯಲ್ಲಿ ಬೂಸ್ಟರ್ ಡೋಸ್ ಲಸಿಕೆ ಪಡೆಯುವಂತೆ ಸರ್ಕಾರ ಜನರಲ್ಲಿ ಮನವಿ ಮಾಡುತ್ತಿದೆ. ಈ ಮಧ್ಯೆ ಕೊರೋನಾ ವಾರಿಯರ್ಸ್ ಗೆ 2ನೇ ಬೂಸ್ಟರ್ ಡೋಸ್ ನೀಡಲು ಚಿಂತನೆ ನಡೆದಿದೆ.

ಕೊರೊನಾ ವಾರಿಯರ್ಸ್ ಗೆ 2ನೇ ಬೂಸ್ಟರ್ ನೀಡಲು ಕೇಂದ್ರ ಸರ್ಕಾರಕ್ಕೆ ಐಎಂಎ ಶಿಫಾರಸ್ಸು ಮಾಡಿದೆ. 2ನೇ ಬೂಸ್ಟರ್ ಡೋಸ್ ಬಗ್ಗೆ ಕೊರೋನಾ ನಿರ್ವಹಣಾ ಸಭೆಯಲ್ಲಿ ಪ್ರಸ್ತಾಪ ಮಾಡಲಾಗಿದೆ.

ಕೊನೆಯ ಡೋಸ್ ಲಸಿಕೆ ಸ್ವೀಕರಿಸಿ ಒಂದು ವರ್ಷವಾಗಿದೆ. ಹೀಗಾಗಿ ಕೋವಿಡ್  4ನೇ ಅಲೆ ಎದುರಿಸಲು 4ನೇ ಡೋಸ್ ಅಗತ್ಯವಿದೆ ಎಂದು ಕೇಂದ್ರ ಸರ್ಕಾರಕ್ಕೆ ಐಎಂಎ ಶಿಫಾರಸ್ಸು ಮಾಡಿದೆ ಎನ್ನಲಾಗಿದೆ.

Key words: giving -2nd -booster dose – Corona -Warriors.