Wednesday, August 5, 2026

BDA Apartments

Home Front Page ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಮಠ, ದೇವಸ್ಥಾನಗಳ ಬಗ್ಗೆ ಗೊತ್ತಿಲ್ಲ- ಸಚಿವ ಆರ್.ಅಶೋಕ್ ಟಾಂಗ್…

ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಮಠ, ದೇವಸ್ಥಾನಗಳ ಬಗ್ಗೆ ಗೊತ್ತಿಲ್ಲ- ಸಚಿವ ಆರ್.ಅಶೋಕ್ ಟಾಂಗ್…

ಬೆಂಗಳೂರು,ಜ,16,2020(www.justkannada.in):  ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಮಠ, ದೇವಸ್ಥಾನಗಳ ಬಗ್ಗೆ ಗೊತ್ತಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಟಾಂಗ್ ನೀಡಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಚಿವ ಆರ್.ಅಶೋಕ್,  ಡಿಕೆಶಿಗೆ ದೇವಸ್ಥಾನ ಮಠದ ಬಗ್ಗೆ ಗೊತ್ತಿಲ್ಲ.  ಡಿಕೆ ಶಿವಕುಮಾರ್ ರಾಜಕಾರಣವೇ ವೇರೆ.  ಇಷ್ಟು ದಿನ ಡಿಕೆಶಿ ಮುಸ್ಲೀಂರನ್ನ ಓಲೈಕೆ ಮಾಡಲು ಮುಂದಾಗಿದ್ದರು.  ಈಗ ಬೆಟ್ಟದ ಮೇಲೆ ಏನೋ ನಿರ್ಮಾಣ ಮಾಡಲು ಹೊರಟಿದ್ದಾರೆ. ಮಠ ದೇವಸ್ಥಾನಗಳನ್ನ ನೋಡಲು ನಾವಿದ್ದೇವೆ ಎಂದು ಕುಟುಕಿದರು.

ಹರಜಾತ್ರೆಯಲ್ಲಿ ಸಿಎಂ ಬಿಎಸ್ ವೈ ಗರಂ ಆದ ವಿಚಾರ ಕುರಿತು ಪ್ರತಿಕ್ರಿಯಿಸಿದ ಆರ್ ಅಶೋಕ್, ನಮ್ಮ ಸಿಎಂ ಮಠಗಳಿಗಾಗಿ ಅಪಾರ ಕೆಲಸ ಮಾಡಿದ್ದಾರೆ.  ತುಂಬಿದ ಸಭೆಯಲ್ಲಿ ಸ್ವಾಮೀಜಿ ಹಾಗೆ ಹೇಳಿದ್ದು ತಪ್ಪು. ಬೇಕಿದ್ದರೇ ಮಠಕ್ಕೆ ಕರೆದು ಸಲಹೆ ಸೂಚನೆಗಳನ್ನ ನೀಡಲಿ. ಸಚಿವ ಸ್ಥಾನ ಕೊಡುವುದು ಸಿಎಂ ಪರಮಾಧಿಕಾರ. ಸಿದ್ದಗಂಗಾ ಮಠ ಮತ್ತು ಆದಿಚುಂಚನಗಿರಿ ಮಠ ಸೇರಿದಂತೆ ಯಾವ ಸ್ವಾಮೀಜಿಗಳೂ ಯಾವತ್ತೂ ಸಹ ಈ ರೀತಿ ಮಾಡಿಲ್ಲ ಎಂದರು.

Key words: Former minister- DK Sivakumar -does not- know -math –temples- Minister -R. Ashok