Friday, September 18, 2026

BDA Apartments

ಮಹಾನ್ ಚೇತನಗಳ ಪ್ರತಿಮೆಗಳಿಗೆ ಮಾಲಾರ್ಪಣೆ : ಗೌರವ ನಮನ ಸಲ್ಲಿಸಿದ ಸಚಿವ ಡಾ. ಯತ...
Home Front Page ಮಹಾನ್ ಚೇತನಗಳ ಪ್ರತಿಮೆಗಳಿಗೆ ಮಾಲಾರ್ಪಣೆ : ಗೌರವ ನಮನ ಸಲ್ಲಿಸಿದ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ

ಮಹಾನ್ ಚೇತನಗಳ ಪ್ರತಿಮೆಗಳಿಗೆ ಮಾಲಾರ್ಪಣೆ : ಗೌರವ ನಮನ ಸಲ್ಲಿಸಿದ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ

ಬೀದರ್, ಆಗಸ್ಟ್ 4,2026 (www.justkannada.in): ಬೀದರ್ ಜಿಲ್ಲಾ ಪ್ರವಾಸದ ಅಂಗವಾಗಿ ಇಂದು ವಿವಿಧ ವೃತ್ತಗಳಲ್ಲಿ ಸ್ಥಾಪಿಸಲಾಗಿರುವ ನಾಡು ಹಾಗೂ ದೇಶದ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಅಪಾರ ಕೊಡುಗೆ ನೀಡಿದ ಮಹಾನ್ ಚೇತನಗಳ ಪ್ರತಿಮೆಗಳಿಗೆ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಹಾತ್ಮ ಬೊಮ್ಮಗೊಂಡೇಶ್ವರರು (ಬೊಮ್ಮಗೊಂಡೇಶ್ವರ ವೃತ್ತ), ಜಗಜ್ಯೋತಿ ಶ್ರೀ ಬಸವೇಶ್ವರರು (ಬಸವೇಶ್ವರ ವೃತ್ತ), ಕ್ರಾಂತಿವೀರ ಭಗತ್ ಸಿಂಗ್ (ಭಗತ್ ಸಿಂಗ್ ವೃತ್ತ), ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ (ಅಂಬೇಡ್ಕರ್ ವೃತ್ತ), ಛತ್ರಪತಿ ಶಿವಾಜಿ ಮಹಾರಾಜರು (ಛತ್ರಪತಿ ಶಿವಾಜಿ ವೃತ್ತ), ಶರಣ ಹಡಪದ ಅಪ್ಪಣ್ಣ (ಗುರು ಶರಣ ಹರಳಯ್ಯ) (ಹಡಪದ ವೃತ್ತ) ಹಾಗೂ ಕ್ರಾಂತಿ ಯೋಗಿ ಮಡಿವಾಳ ಮಾಚಿದೇವ (ಮಡಿವಾಳ ಮಾಚಿದೇವ ವೃತ್ತ) ಅವರ ಪ್ರತಿಮೆಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು.ಮಹಾನ್ ಚೇತನಗಳ ಪ್ರತಿಮೆಗಳಿಗೆ ಮಾಲಾರ್ಪಣೆ yathindra

ಈ ಸಂದರ್ಭದಲ್ಲಿ ಮಾಜಿ ಸಚಿವರು ಹಾಗೂ ಹಾಲಿ ಶಾಸಕ ರಹೀಂ ಖಾನ್, ಬೀದರ್ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಮೃತರಾವ್ ಚಿಮಕೋಡ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು, ಹಿರಿಯರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.ಗೌರವ ನಮನ ಸಲ್ಲಿಸಿದ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ jk02_new jk02 new

Key words: bidar, Minister, Dr. Yathindra Siddaramaiah, Great spirit, Statue, respects