Saturday, September 19, 2026

BDA Apartments

ಎಲ್ಲಾ ಅಸಮಾಧಾನಿತ ಶಾಸಕರನ್ನ ಕರೆದು ಹೈಕಮಾಂಡ್ ಮಾತನಾಡಲಿ- ಎಂ.ಸಿ ಸುಧಾಕರ್ BDA J...
Home Front Page ಎಲ್ಲಾ ಅಸಮಾಧಾನಿತ ಶಾಸಕರನ್ನ ಕರೆದು ಹೈಕಮಾಂಡ್ ಮಾತನಾಡಲಿ- ಎಂ.ಸಿ ಸುಧಾಕರ್

ಎಲ್ಲಾ ಅಸಮಾಧಾನಿತ ಶಾಸಕರನ್ನ ಕರೆದು ಹೈಕಮಾಂಡ್ ಮಾತನಾಡಲಿ- ಎಂ.ಸಿ ಸುಧಾಕರ್

ಚಿಕ್ಕಬಳ್ಳಾಪುರ,ಆಗಸ್ಟ್,4,2026 (www.justkannada.in):  ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಎಲ್ಲಾ ಶಾಸಕರನ್ನ ಹೈಕಮಾಂಡ್ ಕರೆದು ಮಾತನಾಡಲಿ ಬೇರೆ ಜಿಲ್ಲೆಯ ಶಾಸಕರ ನೋವನ್ನೂ ಕೂಡ ಆಲಿಸಲಿ ಎಂದು ಮಾಜಿ ಸಚಿವ ಎಂ.ಸಿ ಸುಧಾಕರ್ ಆಗ್ರಹಿಸಿದರು.

ಇಂದು ಮಾಧ್ಯಮದ ಜೊತೆ ಮಾತನಾಡಿದ ಎಂ. ಸಿ ಸುಧಾಕರ್, ನಾವು ಜನರಿಂದ ಆಯ್ಕೆಯಾಗುವ ಸಚಿವರಲ್ಲ. ಈಗ  ಪಕ್ಷದ ಹೈಕಮಾಂಡ್ ಎಲ್ಲರನ್ನೂ ಕರೆಸಿ ನಮ್ಮ ಜೊತೆ ಚರ್ಚಿಸಬೇಕು ಜಿಲ್ಲೆಯಲ್ಲಿ ಹಸ್ತಕ್ಷೇಪ ಆಗಲ್ಲ ಎಂದು ಭರವಸೆ ಕೊಡಬೇಕು ಎಂದರು.ಎಲ್ಲಾ ಅಸಮಾಧಾನಿತ ಶಾಸಕರನ್ನ ಕರೆದು ಹೈಕಮಾಂಡ್ ಮಾತನಾಡಲಿ BDA JK_Adv BDA Adv

ಕೆಲವರು ಆಂತರಿಕ ಸಮಸ್ಯೆ ಸೃಷ್ಟಿ ಮಾಡುವ ಉದಾಹರಣೆ ಇದೆ. ಅದೆಲ್ಲ ನಮ್ಮ ಜಿಲ್ಲೆಗಳಲ್ಲಿ ನಿಲ್ಲಲಿ. ಯಾವುದೇ ಸಚಿವ ಸ್ಥಾನ ಖಾಲಿ ಇಲ್ಲ ಆದರೆ ನಮ್ಮ ಜಿಲ್ಲೆಗೆ ಪರಿಹಾರ ಏನು?  ಸಿಎಂ ಯಾವ ರೀತಿ ಸ್ಪಂದಿಸುತ್ತಾರೆ? ರಾಜೀನಾಮೆ ಕೊಡುವವರು ಕೊಟ್ಟು ಹೋಗಿ ಅಂತಾ ಸಿಎಂ ಹೇಳ್ತಾರೆ.  ಆದರೆ ಅದು ಸಿಎಂ ಡಿಕೆಶಿ ಶೈಲಿ ಎಂದರು.ಎಂ.ಸಿ ಸುಧಾಕರ್ jk02_new jk02 new

ಬಿಫಾರಂ ನಿಂದ ಮಾತ್ರ ಗೆದ್ದಿಲ್ಲ ವರ್ಚಸ್ಸಿನಿಂದಲೂ ಗೆದ್ದಿದ್ದೇವೆ  ಹೊರಗಿನಿಂದ ಬಂದವರು ಹಸ್ತಕ್ಷೇಪ ಮಾಡಲ್ಲವೆಂದು ಸಿಎಂ ಭರವಸೆ ನೀಡಲಿ. ನಾವು ಮತ್ತೆ ಹೈಕಮಾಂಡ್ ಬಾಗಿಲು ತಟ್ಟುವ ಕೆಲಸ ಮಾಡಲ್ಲ,  ಆದರೆ ಪಕ್ಷದ ವರಿಷ್ಠರು ಎಲ್ಲಾ ಅಸಮಾಧಾನಿತರನ್ನ ಕರೆದು ಮಾತನಾಡಬೇಕು. ಬೇರೆ ಜಿಲ್ಲೆಯ ಶಾಸಕರ ನೋವನ್ನೂ ಕೂಡ ಹೈಕಮಾಂಡ್ ಆಲಿಸಲಿ ಎಂದು ಒತ್ತಾಯಿಸಿದರು.

Key words: Cabinet expansion, Former Minister. MC Sudhakar