ನಟ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ ಭಜರಂಗಿ-2 ಸಿನಿಮಾ ಸೆಟ್ ನಲ್ಲಿ ಅಗ್ನಿ ಅವಘಡ….

ಬೆಂಗಳೂರು,ಜ,16,2020(www.justkannada.in): ಸ್ಯಾಂಡಲ್ ವುಡ್  ನಟ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಅಭಿನಯಿಸುತ್ತಿರುವ ಭಜರಂಗಿ-2  ಸಿನಿಮಾ ಸೆಟ್ ನಲ್ಲಿ ಅಗ್ನಿ ಅವಘಡ ಸಂಭವಿಸಿದೆ.

ಮೋಹನ್ ಬಿ .ಕೆರೆ ಸ್ಡುಡಿಯೋದಲ್ಲಿ ಭಜರಂಗಿ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಸಿನಿಮಾಗಾಗಿ 1 ಕೋಟಿ ರೂ ವೆಚ್ಚದಲ್ಲಿ ಗುಹೆ ಸೆಟ್  ಹಾಕಲಾಗಿತ್ತು. ಈ ನಡುವೆ ಶಾರ್ಟ್ ಸರ್ಕ್ಯೂಟ್ ನಿಂದ ಸಿನಿಮಾ ಸೆಟ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸದ್ಯ ತಕ್ಷಣ ಬೆಂಕಿ ನಂದಿಸಿದ್ದರಿಂದ ಯಾವುದೇ ತೊಂದರೆಯಾಗಿಲ್ಲ.

ಸಿನಿಮಾ ಸೆಟ್ ನಲ್ಲಿ ನಟ ಶಿವರಾಜ್ ಕುಮಾರ್ ಸೇರಿ 300 ಮಂದಿ ಇದ್ದರು ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ಹರ್ಷ ಅವರು, ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದೆ. ಸದ್ಯ ಯಾವುದೇ ಸಮಸ್ಯೆಯಾಗಿಲ್ಲ. ಬೆಂಕಿ ಹಿನ್ನೆಲೆ ಇಂದಿನ ಸಿನಿಮಾ ಶೂಟಿಂಗ್ ನಿಲ್ಲಿಸಿಲಾಗಿದೆ  ಎಂದು ತಿಳಿಸಿದ್ದಾರೆ.

Key words: Bajrangi-2 -cinema set –fire- shooting-actor- Shivraj Kumar.