ರಾಜಕೀಯ ನಿವೃತ್ತಿ ಅಂದ್ಕೊಂಡಿದ್ವಿ ಆದರೆ ಜರ್ನಿಯಿಂದಲೇ ನಿವೃತ್ತಿ : ಪ್ರತಿಮಾ ಪ್ರಸಾದ್‌ ಕಣ್ಣೀರು.

My father had recently retired from politics. But I never thought he would retire so soon from his life journey ," said Pratima Prasad,

 

ಬೆಂಗಳೂರು, ಏ.29, 2024  : (www.justkannada.in news ) ಇತ್ತೀಚೆಗಷ್ಟೆ  ರಾಜಕೀಯದಿಂದ ನಿವೃತ್ತಿ ಪಡೆದಿದ್ದರು  ನಮ್ಮ ತಂದೆ. ಆದರೆ ಅವರು ಇಷ್ಟು ಬೇಗ  ಜರ್ನಿ ಇಂದಲೇ ನಿವೃತ್ತಿ ಪಡೆಯುತ್ತಾರೆ ಎಂದು ಭಾವಿಸಿರಲಿಲ್ಲ ಎಂದು ಹಿರಿಯ ರಾಜಕಾರಣಿ, ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರ ಪುತ್ರಿ ಪ್ರತಿಮಾ ಪ್ರಸಾದ್‌ ಕಣ್ಣೀರಾದರು.

ಇಲ್ಲಿನ ಮಣಿಪಾಲ್ ಆಸ್ಪತ್ರೆಯಲ್ಲಿತಡ ರಾತ್ರಿ 1.20ಕ್ಕೆ ಶ್ರೀನಿವಾಸ ಪ್ರಸಾದ್‌  ಕೊನೆಯುಸಿರೆಳೆದರು. ಮೂತ್ರಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಕಳೆದ 3 ದಿನಗಳ ಹಿಂದಷ್ಟೆ  ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಿಸದೆ ರಾತ್ರಿ ಶ್ರೀನಿವಾಸ್ ಪ್ರಸಾದ್ ನಿಧನ ಹೊಂದಿದರು.

ಈ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಪ್ರಸಾದ್‌  ಪುತ್ರಿ  ಪ್ರತಿಮಾ ಪ್ರಸಾದ್‌,  ಸುಧೀರ್ಘ 50 ವರ್ಷಗಳ ರಾಜಕೀಯದಲ್ಲಿದ್ದ ಸಂಸದ ಶ್ರೀನಿವಾಸ್ ಪ್ರಸಾದ್‌ ಇದೇ  ಮಾರ್ಚ್ 17ಕ್ಕೆ ರಾಜಕೀಯಕ್ಕೆ ಬಂದು 50 ವರ್ಷ ಆಗಿತ್ತು. ಇತ್ತೀಚೆಗೆ ರಾಜಕೀಯ ನಿವೃತ್ತಿ ಸಹ ಘೋಷಿಸಿದ್ದರು. ಆದರೆ ಅವರು ಇಷ್ಟು ಬೇಗ ಜೀವನದಿಂದಲೇ ನಿರ್ಗಮಿಸುತ್ತಾರೆ ಎಂದು ಎಣಿಸಿರಲಿಲ್ಲ.

ನಮ್‌ ತಂದೆ ಒಬ್ಬ ಫೈಟರ್.‌ ಅವರು ಸಮಸ್ಯೆಗಳಿಗೆ ಎಂದು ಬೆನ್ನು ತೋರಿಸಿದವರಲ್ಲ. ಎಲ್ಲವನ್ನು ಎದುರಿಸಿ ನಿಂತವರು. ಹನ್ನೊಂದು ವರ್ಷದ ಹಿಂದೆಯೇ ಅವರಿಗೆ ಕಿಡ್ನಿ ಟ್ರಾನ್ಸ್‌ ಪ್ಲಾಂಟ್‌ ಆಗಿತ್ತು. ಜತೆಗೆ ಸಕ್ಕರೆ ಖಾಯಿಲೆ ಸಹ ಇತ್ತು. ಆದರೂ ನಿಯಮಿತವಾದ ಶಿಸ್ತುಬದ್ಧ ಜೀವನದ ಮೂಲಕ ಅದನ್ನು ನಿಯಂತ್ರಣದಲ್ಲಿರಿಸಿಕೊಂಡಿದ್ದರು ಎಂದು ತಂದೆಯನ್ನು ಸ್ಮರಿಸಿಕೊಂಡರು.

 

ಸಂಸದ ವಿ.ಶ್ರೀನಿವಾಸ್ ಪ್ರಸಾದ್ ನಿಧನ: ನಾಳೆ ಅಂತ್ಯಕ್ರಿಯೆ.

 

ರಾಜಕೀಯ ಹಿನ್ನೆಲೆ :  

14 ಚುನಾವಣೆಯಲ್ಲಿ ಸ್ಪರ್ಧೆ.. 11 ಚುನಾವಣೆಯಲ್ಲಿ ಗೆಲುವು ಕಂಡಿದ್ದರು. ಆರು ಬಾರಿ ಲೋಕಸಭೆಗೆ ಐದು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಕಾಂಗ್ರೆಸ್, ಜೆಡಿಎಸ್, ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ಕೇಂದ್ರ ಸರ್ಕಾರ ಹಾಗೂ ರಾಜ್ಯದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಚಾಮರಾಜನಗರದಿಂದ ಆರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದು, ನಂಜನಗೂಡು ಕ್ಷೇತ್ರದಿಂದ 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

key words: Srinivasa prasad, no more, Mysore, Dalit leader, Ashok Puram

summary: 

My father had recently retired from politics. But I never thought he would retire so soon from his life journey ,” said Pratima Prasad, daughter of veteran politician and MP V Srinivasa Prasad.

My father was a fighter. They are not the ones who have turned their backs on the problems. Those who have faced everything. He had undergone a kidney transplant eleven years ago. He also had diabetes. However, he kept it under control through a regular, disciplined life, she remembered his father.