ಮೈಸೂರು ಮೈತ್ರಿ ಅಭ್ಯರ್ಥಿ ಸೋಲು : ಹೆಚ್.ವಿಶ್ವನಾಥ್ ಮೇಲೆ ಹೊಣೆ ಹೊರಿಸಿದ ಶಾಸಕ ತನ್ವೀರ್ ಸೇಠ್…

ಮೈಸೂರು,ಜೂ,5,2019(www.justkannada.in):  ಹೆಚ್,ಡಿ ದೇವೇಗೌಡರ ಸೋಲಿಗೆ ಸಿದ್ದರಾಮಯ್ಯನೇ ಕಾರಣ ಎಂದು ಹೇಳಿಕೆ ನೀಡಿದ್ದ ಜೆಡಿಎಸ್ ಶಾಸಕ ಹೆಚ್.ವಿಶ್ವನಾಥ್ ಅವರಿಗೆ  ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಟಾಂಗ್ ಕೊಟ್ಟಿದ್ದಾರೆ.

ಮೈಸೂರಿನ  ಮೈತ್ರಿ ಅಭ್ಯರ್ಥಿ ಸೋಲಿಗೆ ಹೆಚ್. ವಿಶ್ವನಾಥ್ ಹೊಣೆ. ಅವರು ಹುಣಸೂರು, ಕೆ.ಆರ್ ನಗರದಲ್ಲಿ ಲೀಡ್ ಕೊಡಿಸಲಿಲ್ಲ ಎಂದು ತನ್ವೀರ್ ಸೇಠ್ ಮೈಸೂರು ಮೈತ್ರಿ ಅಭ್ಯರ್ಥಿ ಸೋಲಿನ ಹೊಣೆಯನ್ನ ಹೆಚ್.ವಿಶ್ವನಾಥ್ ಮೇಲೆ ಹಾಕಿದ್ದಾರೆ.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ತನ್ವೀರ್ ಸೇಠ್, ಸಿದ್ದರಾಮಯ್ಯ ಬಾದಮಿ ಕ್ಷೇತ್ರದ ಶಾಸಕರು. ಅವರ ಒಂದು ಓಟಿನಿಂದ ಏನು ಮಾಡಲು ಆಗಲ್ಲ. ವಿಶ್ವನಾಥ್ ರವರು ಹುಣಸೂರು, ಕೆ.ಆರ್.ನಗರದಲ್ಲಿ ಲೀಡ್ ಕೊಡಿಸಬೇಕಿತ್ತು. ಆದರೆ ಅವರು ಲೀಡ್ ಕೊಡಿಸಲಿಲ್ಲ. ಇದರಲ್ಲೇ ಗೊತ್ತಾಗುತ್ತದೆ ಮೈತ್ರಿ ಪಾಲನೆ ಮಾಡಿಲ್ಲ ಅಂತ. ದೇವೆಗೌಡ್ರು ಹಾಗೂ ನಿಖಿಲ್ ಸೋಲಿಗೆ ಸಿದ್ದರಾಮಯ್ಯ ಕಾರಣರಲ್ಲ ಎಂದು ಹೇಳಿದ್ದಾರೆ.

ನಾಯಕರಾಗಲಿ, ಕಾರ್ಯಕರ್ತರಾಗಲಿ ಮೈತ್ರಿ ಪಾಲನೆ ಮಾಡಲಿಲ್ಲ.. ಅದಕ್ಕಾಗಿ ನಮಗೆ ಈ ಗತಿ ಬಂತು. ನಾವು ಮೈತ್ರಿ ಮಾಡಿಕೊಳ್ಳುವ  ಒಂದು ವರ್ಷ ಮೊದಲೇ ಎಲ್ಲರು ಒಂದಾಗಬೇಕಿತ್ತು. ಮೈತ್ರಿ ನಂತರ ನಾವು ಒಂದಾಗಲೂ ಹೋದವು. ಅದು ಸರಿಯಾಗಿ ಆಗಲಿಲ್ಲ. ಅದಕ್ಕಾಗಿ ಮೈತ್ರಿಗೆ ಹಿನ್ನಡೆ ಉಂಟಾಯಿತು ಎಂದು ತನ್ವೀರ್ ಸೇಠ್ ಬೇಸರ ವ್ಯಕ್ತಪಡಿಸಿದರು.

ನಮ್ಮ ಕಾಂಗ್ರೆಸ್ ಪಕ್ಷ ಶಿಸ್ತಿನ ಪಕ್ಷ. ನಮ್ಮ ಪಕ್ಷದ ಸಿದ್ದಾಂತವನ್ನ ಒಪ್ಪಿ ಬರುವವರನ್ನ ನಾವು ಸ್ವೀಕರಿಸುತ್ತೇವೆ. ನಾವು ಅವರನ್ನ ವಲಸಿಗರಿಗೆ ಎಂದು ನೋಡುವುದಿಲ್ಲ. ಪಕ್ಷಕ್ಕೆ ಯಾರು ಮುಜುಗರ ತರುತಾರೋ ಅಂತವರಿಗೆ ಸರ್ಕಾರದಲ್ಲಿ ಮಣೆ ಹಾಕುತ್ತಾರೆ. ನಮ್ಮ‌ ಪಕ್ಷ‌ದ ರಾಮಲಿಂಗರೆಡ್ಡಿ ಇತರೇ ನಾಯಕರು ಹೇಳುವ ಮಾತನ್ನ ನಾವು ತಿಳಿಯಬೇಕಿದೆ ಎಂದು ತನ್ವೀರ್ ಸೇಠ್ ಹೇಳಿದರು.

Key words: H .Vishwanath was responsible for  mysore alliance candidate defeat – Tanveer Sait said…

#hvishwanath  #responsible #mysore #alliancecandidate #TanveerSait