ಸಿಎಂ ಕುಮಾರಸ್ವಾಮಿ ಸುತ್ತಮುತ್ತ ಬರೀ ಮೂರ್ಖ ಶಿಖಾಮಣಿಗಳೇ ಆವರಿಸಿಕೊಂಡಿದ್ದಾರೆ…

 

ಬೆಂಗಳೂರು, ಜೂ.05, 2019 : (www.justkannada.in news) : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮಾಧ್ಯಮ ಕಾರ್ಯದರ್ಶಿ ದಿನೇಶ್ ಕಾರ್ಯವೈಖರಿ ಬಗ್ಗೆ ಮುಖ್ಯಮಂತ್ರಿಗಳ ಮಾಧ್ಯಮ ಸಮನ್ವಯಾಧಿಕಾರಿ ಸದಾನಂದ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿಗಳ ಮಾಧ್ಯಮ ಸಮನ್ವಯಾಧಿಕಾರಿ ಸದಾನಂದ ತಮ್ಮ ಪೇಸ್ ಬುಕ್ ಪುಟದಲ್ಲಿ ಬರೆದುಕೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಎಡೆಮಾಡಿದೆ. ಈ ಹಿಂದೆ ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾದಗಲೂ ಇದೇ ಸದಾನಂದ ಅವರು, ಸಿಎಂ ಸುತ್ತಮುತ್ತಲಿನ ಅಯೋಗ್ಯರ ಸಲುವಾಗಿಯೇ ಜೆಡಿಎಸ್ ಹಳಿ ತಪ್ಪುತ್ತಿದೆ ಎಂಬರ್ಥದ ಸ್ಟೇಟಸ್ ಅನ್ನು ಫೇಸ್ ಬುಕ್ ಪುಟದಲ್ಲಿ ಪ್ರಕಟಿಸಿದ್ದರು. ಅಧಿಕಾರ ಬಂದ ಮೇಲೆ ಕುಮಾರಸ್ವಾಮಿ ಸನಿಹಕ್ಕೆ ಬಂದವರು, ದಿಕ್ಕು ತಪ್ಪಿಸುತ್ತಿರುವ ಬಗೆಯನ್ನು ನೇರವಾಗಿಯೇ ಬರೆದಿದ್ದರು. ಜತೆಗೆ ಮು.ಮಂ.ಕುಮಾರಸ್ವಾಮಿ ಎಂಬುದಕ್ಕಿಂತಲೂ ಜನತೆಯ ನೆಚ್ಚಿನ ಕುಮಾರಣ್ಣನನ್ನು ಕಾಣಲು ಆಶಿಸುತ್ತಿರುವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಬರಹ ಕೂಡ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿತ್ತು.

ಇದೀಗ ಕರ್ನಾಟಕ ಮಾಧ್ಯಮ ಅಕಾಡೆಮಿಗೆ ನಿವೃತ್ತ ಪತ್ರಕರ್ತ ಪದ್ಮರಾಜ ದಂಡಾವತಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜತೆಗೆ ಈ ನೇಮಕವಾಗಲು ಪಟ್ಟು ಹಿಡಿದ ಸಿಎಂ ಕಾರ್ಯದರ್ಶಿ ದಿನೇಶ್ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಮಿಡಿಯಾ ಅಕಾಡೆಮಿ ನೇಮಕ ಸಂಬಂಧ ಸದಾನಂದ ಅವರು ಆಕ್ಷೇಪ ವ್ಯಕ್ತಪಡಿಸಿ ಪೇಸ್ ಬುಕ್ ಪುಟದಲ್ಲಿ ಬರೆದುಕೊಂಡಿರುವುದು ಹೀಗೆ…..

ದೊರೆ ಸುತ್ತಮುತ್ತ ಹಲ್ಲು ಗಿಂಜಿ ನಿಂತವರು. ಹಲ್ಲು ಗಿಂಜ್ತಿರುವ ತಲೆಯಲ್ಲಿ ಕೂದಲು ಇಲ್ಲದವರು ಸದಾ ಬಾಚಣಿಗೆಯನ್ನು ಜೇಬಿನಲ್ಲಿ ಯಲ್ಲಿಟ್ಟುಕೊಂಡು ಪದೇ ಪದೇ ತಲೆ ಬಾಚಿಕೊಳ್ಳುವುದು ನೋಡಿ ನನಗೆ ನಗಬೇಕೋ ಅಳಬೇಕೋ ಗೊತ್ತಾಗುತ್ತಿಲ್ಲ. ಇಂತಹ ಮೂರ್ಖ ಶಿಖಾಮಣಿಗಳು ದೊರೆ ಸುತ್ತ ಆವರಿಸಿಕೊಂಡಿದ್ದಾರೆ. ಅವರಿಗೂ ಗೊತ್ತಾಗುತ್ತಿಲ್ಲ ನನಗೂ ಗೊತ್ತಾಗುತ್ತಿಲ್ಲ . ಶುದ್ಧ ಹೇಳಿದವರೇ ಈಗ ಹಲ್ಲು ಗಿಂಜಿಕೊಂಡು ಬಹುಪರಾಕ್ ಹೇಳುತ್ತಿದ್ದಾರೆ. ಅಂತಹ ದೊಡ್ಡ ವ್ಯಕ್ತಿಗಳು ಇಂತಹ ಅಯೋಗ್ಯರ ಮುಂದೆ ನಿಂತು ಕೆಲಸ ಗಿಟ್ಟಿಸಿಕೊಳ್ಳುತ್ತಾರೆ. ಎಂಬುದನ್ನು ಕೇಳಿ ನನಗೆ ತಲೆ ತಗ್ಗಿಸಬೇಕು ಎನಿಸಿತು ಅಂತಹ ದೊಡ್ಡ ಮನುಷ್ಯರು ಇಂತಹವರ ಬಳಿ ತಲೆ ತಗ್ಗಿಸಿದ್ದಾರೆ. ಎಂದು ಕೇಳಿ ಬೇಸರವಾಯಿತು ಇದಕ್ಕಾಗಿಯೇ ಈ ಪೋಸ್ಟ್ ಮಾಡುತ್ತಿದ್ದೇನೆ. ಪ್ರಾಜ್ಞರಿಗೆ ಅರ್ಥವಾಗುತ್ತದೆ ಅಯೋಗ್ಯರು ಬಕೆಟ್ ಹಿಡಿಯುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ ನನಗೆ ಬೇಸರವಿಲ್ಲ. ನೋವಿಲ್ಲ ಹಲೋ. ಇಷ್ಟೆಲ್ಲ ಮೋಸ ಮಾಡಿದ ಅವರಿಗೆ ತಿರುಗಿ ಬಗ್ನಿ ಗೂಟ ಹೊಡೆದ ಆತನಿಗೆ ನೀವು ಮತ್ತು ನಿಮ್ ದಿನೇಶ್ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಗಿರಿಯನ್ನು ಕೊಡಿಸಿದ್ದಾರೆ ನನಗೆ ಇದಕ್ಕಿಂತಲೂ ನೋವು ಬೇಕಾಗಿಲ್ಲ ಹಿರಿಯರು ಪ್ರಾಜ್ಞರು ನಿಮಗೆ ಗೊತ್ತಿಲ್ಲವೆಂದರೆ ನಿಮ್ಮ ಬುಡಕ್ಕೆ ನೀವೇ ಬೆಂಕಿ ಹಾಕಿಕೊಂಡಂತೆ . ನೀವೊಮ್ಮೆ ಸಾಮಾನ್ಯ ಜ್ಞಾನ ಇರುವ ಹಿರಿಯ ಪತ್ರಕರ್ತರೊಂದಿಗೆ ಮಾತನಾಡಿ ಆಗ ಎಲ್ಲವೂ ಅರ್ಥವಾಗುತ್ತದೆ. ಡಾಕ್ಟರ್ ಕೃಷ್ಣ ಅವರೇ ನಿಮ್ಮನ್ನು ಜೈಲಿಗೆ ಕಳುಹಿಸಲು ನೂರಾರು ಸ್ಟೋರಿಗಳನ್ನು ಮಾಡಿದ ಪದ್ಮರಾಜ ದಂಡಾವತಿಯವರಿಗೆ ನಿಮ್ಮ ಪ್ರೀತಿಯ ಪಾತ್ರ ದಿನೇಶ್ ಅವರು ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಗಿರಿಯನ್ನು ಕೊಟ್ಟಿದ್ದಾರೆ ಮತ್ತು ಕೊಡಿಸಿದ್ದಾರೆ. ಸಾರಿ ಟು ಸೇ ದಿಸ್.

key words : karnataka-media-academy-sadanada-padmaraja-dandavathe-denish-cm