ಪ್ರಾಧಿಕಾರಗಳ ಅನುಮತಿ ಪಡೆದು ಪಿಂಚಣಿ ಹಣ ಬಳಕೆ: ಮೈಸೂರು ವಿವಿ ಸ್ಪಷ್ಟನೆ.

ಮೈಸೂರು,ಜುಲೈ,25,2022(www.justkannada.in):  ಮೈಸೂರು ವಿವಿಯ ಪಿಂಚಣಿ ಹಣ ದುರ್ಬಳಕೆ ಆಗಿಲ್ಲ. ಈ ಸಂಬಂಧ ವಿಶ್ವವಿದ್ಯಾನಿಲಯದ ಸಂಬಂಧಪಟ್ಟ ಪ್ರಾಧಿಕಾರಗಳ ಅನುಮತಿಯನ್ನು ಪಡೆದುಕೊಂಡೆ ಬಳಸಲಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಕುಲಸಚಿವ ಪ್ರೊ.ಆರ್.ಶಿವಪ್ಪ ಹಾಗೂ ಹಣಕಾಸು ಅಧಿಕಾರಿ ಸಂಗೀತ ಗಜಾನನ ಭಟ್ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಸರ್ಕಾರದ ಅನುದಾನ ಬಂದ ನಂತರ ಎಲ್‌ ಐಸಿ ಮ್ಯಾನೇಜ್‌ ಮೆಂಟ್ ಫಂಡ್‌ ಗೆ ಮರುಭರಿಕೆ ಮಾಡುವ ಕ್ರಮವನ್ನು ಕೈಗೊಳ್ಳಲಾಗುವುದು. ವಿಶ್ವವಿದ್ಯಾನಿಲಯದ ಕಾಮಗಾರಿಗಳಿಗೆ ಪಿಂಚಣಿ ಅನುದಾನವನ್ನು ಬಳಕೆ ಮಾಡಿಕೊಂಡಿಲ್ಲ. ಆದ್ದರಿಂದ ವಿಶ್ವವಿದ್ಯಾನಿಲಯದ ಪಿಂಚಣಿ ಅನುದಾನದ ಮೊತ್ತವು ದುರ್ಬಳಕೆಯಾಗಿರುವುದಿಲ್ಲ. ಈಗಾಗಲೇ ಪಿಂಚಣಿ ಅನುದಾನವನ್ನು ಪೂರ್ಣವಾಗಿ ನೀಡುವಂತೆ ಸರ್ಕಾರಕ್ಕೆ ಹಲವಾರು ಬಾರಿ ಮನವಿಯನ್ನು ಸಹ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸುಮಾರು 1820 ಪಿಂಚಣಿದಾರರಿದ್ದು, ಮಾಹೆಯಾನ ಸುಮಾರು 5 ರಿಂದ 6 ಉದ್ಯೋಗಿಗಳು ನಿವೃತ್ತರಾಗುತ್ತಿರುವುದರಿಂದ ಪ್ರತಿ ತಿಂಗಳು ಸರಾಸರಿ ರೂ. 6 ಕೋಟಿಗಳಷ್ಟು ಪಿಂಚಣಿ ಪಾವತಿಯಾಗುತ್ತಿದೆ. 2021-2022 ನೇ ಸಾಲಿನಲ್ಲಿ ಒಟ್ಟು 57 ಉದ್ಯೋಗಿಗಳು (ಅಧ್ಯಾಪಕ ಮತ್ತು ಅಧ್ಯಾಪಕೇತರರು) ನಿವೃತ್ತರಾಗಿರುತ್ತಾರೆ. ಇವರುಗಳ ನಿವೃತ್ತಿ ಸೌಲಭ್ಯಗಳು ಹಾಗೂ ಮಾಹೆಯಾನ ಪಿಂಚಣಿ ಪಾವತಿಗಾಗಿ 91.47 ಕೋಟಿಗಳಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು.

ದಿನಾಂಕ 08-03-2021ರಂದು ಮಂಡಿಸಿದ ರಾಜ್ಯ ಸರ್ಕಾರದ 2021-22ನೇ ಆಯವ್ಯಯದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತಿ ವೇತನಗಳಿಗೆ ಸಹಾಯಾನುಧಾನ 44.16 ಕೋಟಿಗಳನ್ನು ಮಾತ್ರ ನಿಗದಿಗೊಳಿಸಿ ಬಿಡುಗಡೆ ಮಾಡಲಾಗಿದೆ. ಆದರೆ 47.30 ಕೋಟಿಗಳಿಗೂ ಹೆಚ್ಚುವರಿಯಾಗಿ ಖರ್ಚಾಗಿರುವ ಮೊತ್ತವನ್ನು ವಿಶ್ವವಿದ್ಯಾನಿಲಯದ ಎಲ್‌ ಐಸಿ ಮ್ಯಾನೇಜ್‌ ಮೆಂಟ್ ಫಂಡ್‌ ನಿಂದ ಭರಿಸಲಾಗಿರುತ್ತದೆ. ಒಟ್ಟಾರೆ 2021-22ನೇ ಸಾಲಿಗೆ ರೂ. 91.46 ಕೋಟಿ ಖರ್ಚಾಗಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಸರ್ಕಾರ ಕೊಟ್ಟಿದ್ದು 50 ಕೋಟಿಯಷ್ಟೆ..

ಅಂತೆಯೇ, 2022-23ನೇ ಸಾಲಿನ ರಾಜ್ಯದ ಆಯವ್ಯಯದಲ್ಲಿ ಮೈಸೂರು ವಿಶ್ವವಿದ್ಯಾನಿಲಯವು 100.6 ಕೋಟಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸರ್ಕಾರವು ರೂ. 50.00 ಕೋಟಿಗಳ ಅನುದಾನವನ್ನು ನಿಗದಿಪಡಿಸಿ ಪ್ರತಿ ಮೂರು ತಿಂಗಳಿಗೊಂದಾವರ್ತಿಯಂತೆ ಬಿಡುಗಡೆಗೊಳಿಸುತ್ತಿದೆ. ನಾವು ಕೇಳಿದ ಒಟ್ಟಾರೆ ಅನುದಾನಕ್ಕೆ ಶೇ. 50ಕ್ಕಿಂತ ಕಡಿಮೆ ಅನುದಾನವನ್ನು ನಿಗದಿಪಡಿಸಲಾಗಿರುತ್ತದೆ. ಈಗಾಗಲೇ ಪಿಂಚಣಿ ಹಾಗೂ ನಿವೃತ್ತಿಯ ಇತರೆ ವೆಚ್ಚಗಳಿಗೆ ರೂ. 8.00 ಕೋಟಿ ಅಧಿಕ ಮೊತ್ತವನ್ನು ಎಲ್‌ ಐಸಿ ಮ್ಯಾನೇಜ್‌ಮೆಂಟ್ ಫಂಡ್‌ ನಿಂದ ವಿಶ್ವವಿದ್ಯಾನಿಲಯದಿಂದಲೇ ಪಾವತಿಸಲಾಗಿರುತ್ತದೆ.

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರತಿ ತಿಂಗಳು ನಿವೃತ್ತಿಯಾಗುವ ಅಧ್ಯಾಪಕ ವೃಂದದವರಿಗೆ ಪಿಂಚಣಿ ಸೌಲಭ್ಯದ ಜೊತೆಯಲ್ಲಿ ನಿವೃತ್ತಿಯ ಗ್ರಾಚ್ಯುಯಿಟಿ, ಕಮ್ಯುಟೇಷನ್ ಹಾಗೂ ಗಳಿಕೆ ರಜೆ ನಗದೀಕರಣಗಳಿಗೆ ಒಟ್ಟು ಸುಮಾರು 60 ಲಕ್ಷಗಳಿಂದ 70 ಲಕ್ಷಗಳವರೆಗೆ ಪ್ರತಿಯೊಬ್ಬ ಅಧ್ಯಾಪಕ ವೃಂದದವರಿಗೆ 7ನೇ ಯುಜಿಸಿ ವೇತನದಡಿಯಲ್ಲಿ ನೀಡಬೇಕಾಗಿರುತ್ತದೆ. ಹಾಗೆಯೇ ಅಧ್ಯಾಪಕೇತರ ವೃಂದದವರಿಗೂ ಪಿಂಚಣಿ ಸೌಲಭ್ಯದ ಜೊತೆಗೆ ನಿವೃತ್ತಿಯ ಗ್ರಾಚ್ಯುಯಿಟಿ, ಕಮ್ಯುಟೇಷನ್ ಹಾಗೂ ಗಳಿಕೆ ರಜೆಯ ಸೌಲಭ್ಯವನ್ನು ನೀಡಬೇಕಾಗಿರುತ್ತದೆ. ಅಧ್ಯಾಪಕ ಹಾಗೂ ಅಧ್ಯಾಪಕೇತರ ಪಿಂಚಣಿದಾರರಿಗೆ ಪಿಂಚಣಿ ಸೌಲಭ್ಯಗಳನ್ನು ಎಲ್‌ ಐಸಿ ಮ್ಯಾನೇಜ್‌ಮೆಂಟ್  ಫಂಡ್‌ ನಿಂದ ಭರಿಸಲಾಗಿರುತ್ತದೆ.

ವಿಶ್ವವಿದ್ಯಾನಿಲಯದಲ್ಲಿ 2021-22ನೇ ಸಾಲಿನಲ್ಲಿ (ಅಧ್ಯಾಪಕ -14. ಅಧ್ಯಾಪಕೇತರ ಸಿಬ್ಬಂದಿ-33) ಒಟ್ಟು 47 ನಿವೃತ್ತದಾರರಿಗೆ ಹಾಗೂ 2022-23ನೇ ಸಾಲಿನಲ್ಲಿ (ಅಧ್ಯಾಪಕ – 11, ಅಧ್ಯಾಪಕೇತರ-43) ಒಟ್ಟು 54 ನಿವೃತ್ತದಾರರಿಗೆ ಪಿಂಚಣಿ ಹಾಗೂ ಇನ್ನಿತರೆ ಸೌಲಭ್ಯಗಳನ್ನು ನೀಡುತ್ತಾ ಬಂದಿದೆ. ಇದರ ಜೊತೆಗೆ ಅಧ್ಯಾಪಕೇತರ ತಾತ್ಕಾಲಿಕ ಸಿಬ್ಬಂದಿಗಳಿಗೆ ಹಾಗೂ ಅತಿಥಿ ಉಪನ್ಯಾಸಕರುಗಳಿಗೆ ವೇತನವನ್ನು ನೀಡಲು ಪಿಂಚಣಿ ಅನುದಾನವನ್ನು ಕೆಲವೊಂದು ಸಂದರ್ಭದಲ್ಲಿ ಮಾತ್ರ ಉಪಯೋಗಿಸಿಕೊಳ್ಳಲಾಗಿದ್ದು ಈ ಮೊತ್ತವನ್ನು ಸಹ ಎಲ್‌ ಐಡಿ ಮ್ಯಾನೇಜ್‌ಮೆಂಟ್ ಫಂಡ್‌ ನಿಂದಲೇ ಭರಿಸಿ, ನಂತರ ಆ ಮೊತ್ತವನ್ನು ಮರುಭರಿಕೆ ಮಾಡಲಾಗಿರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.

Key words: Utilization – pension- money – permission –authorities-Mysore University- clarification.

ENGLISH SUMMARY..

Pension funds utilized only after obtaining permission from the authorities concerned: UoM clarifies
Mysuru, July 25, 2022 (www.justkannada.in): University of Mysore Vice-Chancellor Prof. G. Hemanth Kumar, Registrar Prof. R. Shivappa and Finance Officer Sangeeta Gajanan Bhat have issued a joint press release stating that the University’s pension amount has not been misused, and it has been utilized only after obtaining the permission of the authorities concerned.
The press release read, it will be refunded to the LIC Management Fund after getting the funds from the government. The pension amount has not been used for any works of the University. We have requested the State Government several times already to release pension amount completely.
“There are 1820 pensioners in the University of Mysore. About 5 to 6 employees are getting retired every month. Hence, a sum of Rs. 6 crore is being spent for pension every month on an average. During 2021-22, 57 employees (teaching and non-teaching) will retire. Hence, a request was submitted for a sum of Rs. 91.47 crore to pay towards the monthly pension amount and other retirement benefits of the employees.
However, the State Government has released only a sum of Rs. 44.16 crore in the 2021-22 budget. An additional sum of Rs. 47.30 crore has been spent for pension and retirement benefits, which has been utilized from the LIC Management funds. A total sum of Rs. 91.46 crore is spent during the year 2021-22, the press release read.