ಟಿಆರ್’ಪಿ ರೇಟಿಂಗ್ ನಲ್ಲೂ ದಾಖಲೆ ಬರೆದ ದೃಶ್ಯಂ 2

ಬೆಂಗಳೂರು, ಮೇ 29, 2021 (www.justkannada.in): ಮೋಹನ್ ಲಾಲ್ ಅಭಿನಯದ ದೃಶ್ಯಂ 2 ಸಿನಿಮಾ ಟಿಆರ್‌ಪಿ ರೇಟಿಂಗ್‌ ನಲ್ಲಿ ದಾಖಲೆ ಬರೆದಿದೆ.

ಹೌದು. ಒಟಿಟಿಯಲ್ಲಿ ಬಿಡುಗಡೆಯಾಗಿ ಭಾರಿ ಸದ್ದು ಮಾಡಿದ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅಭಿನಯದ ದೃಶ್ಯಂ 2 ಚಿತ್ರ ಕಿರುತೆರೆಯಲ್ಲೂ ದಾಖಲೆ ಬರೆದಿದೆ.

ಮಲಯಾಳಂ ಕಿರುತೆರೆ ಇತಿಹಾಸದಲ್ಲಿ ಇದುವರೆಗೆ ಹೆಚ್ಚು ವೀಕ್ಷಿಸಿದ ಮೂರನೇ ಚಿತ್ರವಾಗಿ ಹೊರಹೊಮ್ಮಿದೆ.

ಕಿರುತೆರೆಯಲ್ಲಿ ಪ್ರಥಮ ಬಾರಿಗೆ ಪ್ರದರ್ಶನವಾದ ಸಮಯದಲ್ಲಿ 6.58 ಟಿಆರ್‌ಪಿ ಇಂಪ್ರೆಶನ್ ಗಳನ್ನು ದಾಖಲಿಸಿದೆ.

ಪುಲೊಇಮುರುಗನ್ ಹಾಗೂ ಬಾಹುಬಲಿ ದಿ ಕನ್‌ಕ್ಲೂಷನ್ ನಂತರದ ಅತಿ ಹೆಚ್ಚು ಮಂದಿ ಟಿವಿಯಲ್ಲಿ ವೀಕ್ಷಿಸಿದ ಸಿನಿಮಾ ಆಗಿದೆ.