ಬೆಂಗಳೂರಿನಲ್ಲಿ ಬಡ ಜನರ ಹಸಿವು ನೀಗಿಸುತ್ತಿದ್ದಾರೆ ಸೋನು ಸೂದ್

ಬೆಂಗಳೂರು, ಮೇ 29, 2021 (www.justkannada.in): ನಟ ಸೋನು ಸೂದ್ ಬೆಂಗಳೂರಿನಲ್ಲಿ ನಿತ್ಯ 5,000 ಜನರಿಗೆ ತಮ್ಮ ಫೌಂಡೇಷನ್ ವತಿಯಿಂದ ಆಹಾರ ವಿತರಿಸುತ್ತಿದ್ದಾರೆ.

ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ಆಕ್ಸಿಜನ್, ವೆಂಟಿಲೇಟರ್ ಒದಗಿಸಿದ್ದ ಸೋನು ಇದೀಗ ಬಡ ಜನರ ಹಸಿವನ್ನು ನೀಗಿಸುವ ಮೂಲಕ ಕನ್ನಡಿಗರ ನೆರವಿಗೆ ಧಾವಿಸಿದ್ದಾರೆ.

ಬೀಜಿಂಗ್ ಬೈಟ್ಸ್ ರೆಸ್ಟೊರೆಂಟ್ ಮಾಲೀಕ ಇಬ್ರಾಹಿಂ ಹಾಗೂ ಕರ್ನಾಟಕದ ರಾಜ್ಯ ರೈಲ್ವೇ ಪೊಲೀಸರು ಕೂಡ ಸೋನು ಸೂಡ್ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.

ಸೋನು ಸೂದ್ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.