ಮಂಗಳಮುಖಿಯರ ಮೊಗದಲಿ ಸಂತಸವಿತ್ತ ‘ವೀ ಕೇರ್ ಫಾರ್ ಯೂ ಮೈಸೂರು’

ಮೈಸೂರು,ಮೇ,29,2021(www.justkannada.in): ಕೊರೋನಾ ಎರಡನೇ ಅಲೆ ತೀವ್ರತೆ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದು, ಇಂತಹ ಸಂದರ್ಭದಲ್ಲಿ ಭಿಕ್ಷಾಟನೆ ಮಾಡುತ್ತ ಜೀವನ ಸಾಗಿಸುತ್ತಿದ್ದ ತೃತೀಯ ಲಿಂಗಿಗಳ ಜೀವನವು ಅಯೋಮಯವಾದುದ್ದನ್ನು ಗಮನಿಸಿದ ವೀ ಕೇರ್ ಫಾರ್ ಯೂ ಮೈಸೂರು ತಂಡ ಇದೀಗ ಅವರ ನೆರವಿಗೆ ಧಾವಿಸಿದೆ.

ತೃತೀಯ ಲಿಂಗಿಗಳು ತಮ್ಮ ಅಳಲನ್ನು ತೋಡಿಕೊಂಡ ತಕ್ಷಣವೇ  ತಕ್ಷಣವೇ ಅವರಿಗೆ ಅಗತ್ಯವಿರುವ ಅಂಶಗಳನ್ನು ಕಲೆಹಾಕಿದ ವೀ ಕೇರ್ ಫಾರ್ ಯೂ ಮೈಸೂರು ತಂಡ ಹಾಗೂ ಸದಸ್ಯರು  ಸುಮಾರು 160ಕ್ಕೂ ಹೆಚ್ಚು ಮೈಸೂರು ನಗರದ ಉದಯಗಿರಿ, ಮೇಟಗಳ್ಳಿ, ರಾಮಸ್ವಾಮಿ ವೃತ್ತ, ಶ್ರೀರಾಂಪುರದಲ್ಲಿ ವಾಸವಿರುವ ಮಂಗಳಮುಖಿಯರಿಗೆ ತಿಂಗಳುಗಳಿಗೆ ಒದಗುವಷ್ಟು ಆಹಾರ ದಿನಸಿ ಪದಾರ್ಥಗಳ ಕಿಟ್ ಗಳನ್ನು ಶರವೇಗದಲ್ಲಿ ವಿತರಣೆ ನಡೆಸಿದರು.

ದಿನಸಿ ಕಿಟ್ ಗಳನ್ನು ಪಡೆದ ಫಲಾನುಭವಿ ಮಂಗಳಮುಖಿಯರು ವೀ ಕೇರ್ ಫಾರ್‌ ಯೂ ಮೈಸೂರು ತಂಡದ ಯುವಕರಿಗೆಲ್ಲರಿಗೂ ಹರಸಿ ಹಾರೈಸಿದಲ್ಲದೆ ತಂಡದ  ಈ ಶ್ರೇಷ್ಠ ಸೇವಾ ಕಾರ್ಯಕ್ಕೆ ಶ್ಲಾಘಿಸಿದರು.

ವೀ ಕೇರ್ ಫಾರ್ ಯೂ ಮೈಸೂರು ತಂಡವು ಇದುವರೆಗೂ 1700ಕ್ಕೂ ಹೆಚ್ಚು ಬಡಬಗ್ಗರಿಗೆ , ನಿರಾಶ್ರಿತರಿಗೆ ದಿನ ನಿತ್ಯ ಆಹಾರ ಪೊಟ್ಟಣ ನೀಡಲಾಗುತ್ತಿದೆ. ಅಲ್ಲದೇ ಲಾಕ್ ಡೌನ್ ಆದ ಸಮಯದಿಂದಲೂ 350 ಕ್ಕೂ ಹೆಚ್ಚು ಸ್ಲಮ್ ಕುಟುಂಬಗಳಿಗೆ , 50 ಕ್ಕೂ ಹೆಚ್ಚು ಅಂಗವಿಕಲರಿಗೆ (ವಿಶೇಷ ಚೇತನರಿಗೆ) ದಿನಸಿ ಕಿಟ್ ಗಳನ್ನು ನೀಡಿ ವೀ ಕೇರ್ ಫಾರ್‌ ಯೂ ಮೈಸೂರು ತಂಡವು ನೆರೆವೇರಿಸಿದೆ.

ಮತ್ತಷ್ಟು ಸೇವಾವಸತಿಗಳಿಗೆ ಸಂಕಷ್ಟದಲ್ಲಿ ಸಿಲುಕಿರುವವರಿಗೆ ಸಮಾಜದ ಕಡೆಯ ವ್ಯಕ್ತಿಗಳು ಈ ಕೊರೊನ ಸಂದರ್ಭದಲ್ಲಿ ಹಸಿವಿನಿಂದ ಹಾಗು ಅನಾರೋಗ್ಯದಿಂದ ಬಳಲಬಾರದೆಂಬ ಸದುದ್ದೇಶವನ್ನಿಟ್ಟುಕೊಂಡು ಲಾಕ್ ಡೌನ್ ಮುಗಿಯುವವರೆಗೂ ಈ ಸೇವೆ ಹೀಗೆ ಮುಂದುವರೆಸಲಾಗುವುದು ಹಾಗು ಇದಕ್ಕೆ ಮೈಸೂರಿನ ಸಹೃದಯಿ ಜನತೆಯ ಸಹಕಾರವು ಬೇಕು ಹಾಗೂ ನಮ್ಮೊಡನೆ ಈ ನರ ನಾರಾಯಣ ಸೇವಾಯಜ್ಞಕ್ಕೆ ಭಾಗಿಯಾಗಲು ವೀ ಕೇರ್ ಫಾರ್ ಯೂ ಮೈಸೂರು ತಂಡದ ಶಿಬು ಆಂಡಿಯಾ +919945897401 ಅವರನ್ನು ಸಂಪರ್ಕಿಸಬಹುದು ಎಂದು ವೀ ಕೇರ್ ಫಾರ್‌ ಯೂ ಮೈಸೂರು ತಂಡ ತಿಳಿಸಿದೆ.

Key words:  We Care for You Mysore- Assistance-transgender-mysore