ಸೋಷಿಯಲ್ ಮೀಡಿಯಾದಲ್ಲಿ ಅಂಬಿ ನೆನಪು ಮೆಲುಕು ಹಾಕಿದ ಅಭಿಮಾನಿಗಳು

ಬೆಂಗಳೂರು, ಮೇ 29, 2021 (www.justkannada.in): ಇಂದು ರೆಬಲ್ ಸ್ಟಾರ್ ಅಂಬರೀಶ್ ಅವರ ಜನ್ಮ ದಿನ. ಅವರು ಇಂದು ಬದುಕಿದ್ದರೆ 69ನೇ ವಸಂತಕ್ಕೆ ಕಾಲಿಡುತ್ತಿದ್ದರು.

ಕೊರೊನಾ ಕಾರಣದಿಂದಾಗಿ ಅಂಬರೀಶ್ ಹುಟ್ಟುಹಬ್ಬದ ಸಾರ್ವಜನಿಕ ಆಚರಣೆ ಮಾಡುವಂತಿಲ್ಲ. ಅಭಿಮಾನಿಗಳೆಲ್ಲರೂ ಅಂಬರೀಶ್ ಹುಟ್ಟುಹಬ್ಬವನ್ನು ಸೋಷಿಯಲ್ ಮೀಡಿಯಾದಲ್ಲಿ ಆಚರಿಸುತ್ತಿದ್ದಾರೆ.

ಅನ್ನದಾನ, ರಕ್ತದಾನ ಶಿಬಿರಗಳು, ವಿಶೇಷ ಪೂಜೆ, ಮೆರವಣಿಗೆ, ಪುತ್ಥಳಿ ಪೂಜೆ ಹೀಗೆ ಹಲವು ಬಗೆ ಕಾರ್ಯಕ್ರಮಗಳನ್ನು ಅಂಬರೀಶ್ ಅಭಿಮಾನಿಗಳು ಆಯೋಜಿಸಿರುತ್ತಿದ್ದರು. ಆದರೆ ಕೊರೊನಾ ಅದೆಲ್ಲದಕ್ಕೂ ಬ್ರೇಕ್ ಹಾಕಿದೆ.

ಯಾವುದೇ ಸಾರ್ವಜನಿಕ ಆಚರಣೆ ಅಥವಾ ಸಮಾರಂಭ ಮಾಡುವುದು ಬೇಡವೆಂದು ಸಂಸದೆ ಸುಮಲತಾ ಮನವಿ ಮಾಡಿದ್ದಾರೆ.