ರೆಬಲ್ ಸ್ಟಾರ್ ಅಂಬಿ ಸ್ಮಾರಕಕ್ಕೆ ಸುಮಲತಾ ಪೂಜೆ

ಬೆಂಗಳೂರು, ಮೇ 29, 2021 (www.justkannada.in): ಅಂಬಿ ಸ್ಮಾರಕಕ್ಕೆ ಅವರ ಪತ್ನಿ ಸಂಸದೆ ಸುಮಲತಾ ಅಂಬರೀಶ್ ಪೂಜೆ ಸಲ್ಲಿಸಿದ್ದಾರೆ.

ರೆಬೆಲ್ ಸ್ಟಾರ್ ಅಂಬರೀಷ್ ಅವರ 69ನೇ ವರ್ಷದ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಅಂಬಿ ಸ್ಮಾರಕಕ್ಕೆ ಪೂಜೆ ಸಲ್ಲಿಸಲಾಗಿದೆ.

ಅಂಬರೀಶ್ ಇಂದು ನಮ್ಮೊಂದಿಗಿಲ್ಲ. ಆದ್ರೆ ಅವರ ನೆನಪು ಮಾತ್ರ ಶಾಶ್ವತ.‌ ಅವರಿದ್ದಾಗ ಪ್ರತಿ ವರ್ಷ ಅಭಿಮಾನಿಗಳು ರಾಜ್ಯದ ಮೂಲೆ ಮೂಲೆಗಳಿಂದ ನಮ್ಮ ಮನೆಗೆ ಬಂದು ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸುತ್ತಿದ್ದರು ಎಂದು ಸ್ಮರಿಸಿದರು.

ಕಳೆದ ಎರಡು ವರ್ಷಗಳಿಂದ ನಾವೇ ಮಂಡ್ಯಕ್ಕೆ ತೆರಳಿ ಅಲ್ಲಿ ಆಚರಿಸುತ್ತಿದ್ದೇವೆ. ಆದರೆ ಈ ವರ್ಷ ಕೊರೋನಾ ಕಾರಣದಿಂದ ಸಂಭ್ರಮದ ಆಚರಣೆ ಇಲ್ಲ ಎಂದು ಸುಮಲತಾ ಹೇಳಿದರು.