Wednesday, August 5, 2026

BDA Apartments

Home Front Page ನಮ್ಮ ವಿರುದ್ಧ ರಾಜಕೀಯ ಷಡ್ಯಂತ್ರ: 15 ದಿನ ಕಾದು ನೋಡಿ – ಎಂಎಲ್ ಸಿ ಸೂರಜ್...

ನಮ್ಮ ವಿರುದ್ಧ ರಾಜಕೀಯ ಷಡ್ಯಂತ್ರ: 15 ದಿನ ಕಾದು ನೋಡಿ – ಎಂಎಲ್ ಸಿ ಸೂರಜ್ ರೇವಣ್ಣ

ಮೈಸೂರು, ಜುಲೈ, 26,2024 (www.justkannada.in): ನಮ್ಮ ಕುಟುಂಬದ ವಿರುದ್ಧ ರಾಜಕೀಯ ಷಡ್ಯಂತ್ರ ನಡೆದಿದೆ. ಕಾಲವೇ ಇದಕ್ಕೆ ಉತ್ತರ ಕೊಡಲಿದೆ. ಇನ್ನು 15 ದಿನ ಕಾದು ನೋಡಿ ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದು ವಿಧಾನಪರಿಷತ್ ಜೆಡಿಎಸ್ ಸದಸ್ಯ ಸೂರಜ್ ರೇವಣ್ಣ ತಿಳಿಸಿದರು.

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು  ಮಾತನಾಡಿದ ಎಂ.ಎಲ್.ಸಿ ಸೂರಜ್ ರೇವಣ್ಣ, ಷಡ್ಯಂತ್ರ ಮಾಡಿ ನಮ್ಮನ್ನ ಪ್ರಕರಣದಲ್ಲಿ ಸಿಲುಕಿಸಿದ್ರು. ಸತ್ಯವನ್ನು ತುಂಬಾ ದಿನ ಮುಚ್ಚಿಡಲು ಸಾದ್ಯವಿಲ್ಲ. ಇನ್ನು 15 ದಿನ ಕಾದು ನೋಡಿ ಎಲ್ಲದಕ್ಕೂ ಉತ್ತರ ಸಿಗಲಿದೆ. ನಾಡ ಅಧಿದೇವತೆ  ಚಾಮುಂಡಿ ತಾಯಿ ದರ್ಶನ ಪಡೆದಿದ್ದೇನೆ. ಪ್ರತಿ ವರ್ಷ ತಂದೆಯವರ ಜೊತೆ ಬರುತ್ತಿದ್ದೆ. ಈ ಬಾರಿ ಬರಲು ಸ್ವಲ್ಪ ತಡವಾಯಿತು. ನಾಡ ಅಧಿದೇವತೆ ನಮ್ಮ ರಕ್ಷಣೆಗೆ ಇದ್ದಾಳೆ ಎಂದರು.

ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಸೂರಜ್ ರೇವಣ್ಣ ಜಾಮೀನು ಪಡೆದು ಹೊರಬಂದಿದ್ದಾರೆ.

Key words: Mysore, Chamundi hills, MLC, Suraj Revanna