Sunday, September 20, 2026

BDA Apartments

Home Front Page ಬಿಡದಿ ಟೌನ್ ಶಿಪ್ ವಿರುದ್ದ ವಿಧಾನಸೌಧದ ಒಳಗೆ ಹೊರಗೆ ಜಂಟಿಯಾಗಿ ಹೋರಾಟ- ಆರ್.ಅಶೋಕ್

ಬಿಡದಿ ಟೌನ್ ಶಿಪ್ ವಿರುದ್ದ ವಿಧಾನಸೌಧದ ಒಳಗೆ ಹೊರಗೆ ಜಂಟಿಯಾಗಿ ಹೋರಾಟ- ಆರ್.ಅಶೋಕ್

ನವದೆಹಲಿ,ಆಗಸ್ಟ್,5,2026 (www.justkannada.in): ಬಿಡದಿ ಟೌನ್ ಶಿಪ್ ಯೋಜನೆ ವಿರುದ್ದ ವಿಧಾನಸೌಧದ ಒಳಗೆ ಹೊರಗೆ ಬಿಜೆಪಿ- ಜೆಡಿಎಸ್  ಜಂಟಿಯಾಗಿ ಹೋರಾಟ ಮಾಡುತ್ತೇವೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ವಿಧಾನ ಮಂಡಲ ಅಧೀವೇಶನದಲ್ಲಿ ಹೋರಾಟದ ಬಗ್ಗೆ ಚರ್ಚಿಸಿದ್ದೇವೆ.  ಹೆಚ್ ಡಿಕೆ ಜೊತೆ ಬೊಮ್ಮಾಯಿ, ಪಿಸಿ ಮೋಹನ್ ಚರ್ಚೆ ಮಾಡಿದ್ದೇವೆ. ವಿಧಾನ ಮಂಡಲ ಅಧಿವೇಶನಕ್ಕೂ ಮೊದಲು ಹೋರಾಟದ ಚರ್ಚೆ ಮಾಡಿದ್ದೇವೆ ಎಂದರು.

ರಾಜ್ಯದಲ್ಲಿ ಹೊಸ ಸಿಎಂ ಬಂದರೂ ಯಾವುದೇ ಬದಲಾವಣೆ ಆಗಿಲ್ಲ.  ಸಿಎಂ ಬದಲಾದರೂ ಏನು ಬದಲಾಗಿಲ್ಲ ಲಂಚ ತಾಂಡವಾಡುತ್ತಿದೆ. ದೆಹಲಿಗೆ ಹಣ ಕೊಡದಿದ್ದರಿಂದ ಸಚಿವನಾಗಿಲ್ಲವೆಂದು ಕಾಂಗ್ರೆಸ್ ನ ಕೆಲವು ಶಾಸಕರು ಬಹಿರಂಗವಾಗಿಯೇ ಹೇಳುತ್ತಿದ್ದಾರೆ. ಬಿಡದಿ ಲ್ಯಾಂಡ್ ಸ್ಕ್ಯಾಮ್ ಮಾಡಲು ಡಿಕೆ ಶಿವಕುಮಾರ್ ನಿರ್ಧರಿಸಿದ್ದಾರೆ. ಬಿಡದಿ ಟೌನ್ ಶಿಪ್ ಯೋಜನೆ ವಿರುದ್ದ ಹೋರಾಟ ಮಾಡಿದ್ದೇವೆ.  ಟೌನ್ ಶಿಪ್ ವಿರುದ್ದ ಜೆಡಿಎಸ್ ಕೂಡ ಹೋರಾಟ ಮಾಡಿದೆ. ವಿಧಾನಸೌಧದ ಒಳಗೆ ಹೊರಗೆ ಜಂಟಿಯಾಗಿ ಹೋರಾಟ ಮಾಡುತ್ತೇವೆ ಎಂದು ಆರ್.ಅಶೋಕ್ ತಿಳಿಸಿದರು.ಬಿಡದಿ ಟೌನ್ ಶಿಪ್ ವಿರುದ್ದ ವಿಧಾನಸೌಧದ ಒಳಗೆ ಹೊರಗೆ ಜಂಟಿಯಾಗಿ ಹೋರಾಟ jk02_new jk02 new

Key words: Joint struggle, Vidhana Soudha, against, Bidadi Township, R. Ashok