ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದಿದ್ದೇಕೆ ಮಹೇಶ್ ಬಾಬು

ಬೆಂಗಳೂರು, ಮೇ 29, 2021 (www.justkannada.in): 

ಮಹೇಶ್ ಬಾಬು ಅಭಿನಯದ ಸರ್ಕಾರು ವಾರಾ ಪಾಟಾ ಚಿತ್ರದ ಫಸ್ಟ್ ಲುಕ್ ಮೇ 31ಕ್ಕೆ ಬಿಡುಗಡೆ ಸಾಧ್ಯತೆ ಇದೆ.

ಹೌದು. ಚಿತ್ರದ ಪೋಸ್ಟರ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದೆ. ಮೇ31ರಂದು ಫಸ್ಟ್ ಲುಕ್ ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಈ ನಡುವೆ ಚಿತ್ರದ ನಿರ್ಮಾಪಕರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಮೇ31ರಂದು ಚಿತ್ರದ ಯಾವುದೇ ಫಸ್ಟ್ ಲುಕ್ ಬಿಡುಗಡೆಯಾಗುತ್ತಿಲ್ಲ ಎಂದು ಅಧಿಕೃತ ಮಾಹಿತಿ ನೀಡಿದ್ದಾರೆ.

ಚಿತ್ರದ ಕುರಿತು ಸುಳ್ಳು ಸುದ್ದಿ ಹರಡಬಾರದು ಎಂದು ಮಹೇಶ್ ಬಾಬು ಕೂಡ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.