ಸಚಿವ ಆರ್ ಅಶೋಕ್  ಹೇಳಿಕೆಗೆ ಕೆಪಿಸಿಸಿ ವಕ್ತಾರ ಎಚ್ ಎ ವೆಂಕಟೇಶ್ ಖಂಡನೆ…

ಮೈಸೂರು,ಏಪ್ರಿಲ್,28,2021(www.justkannada.in): ಕೋವಿಡ್-19 ಹೆಚ್ಚಳದಿಂದ ರಾಜ್ಯದಲ್ಲಿ ಮುಂದಿನ ಎರಡು ತಿಂಗಳು ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭಗಳನ್ನು ನಡೆಸದಿರಲಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿರುವುದು ಅತ್ಯಂತ ಹಾಸ್ಯಾಸ್ಪದವಾಗಿದೆ ಎಂದು ಕೆಪಿಸಿಸಿ ವಕ್ತಾರ ಎಚ್.ಎ ವೆಂಕಟೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.jk

ಸಚಿವ ಆರ್.ಅಶೋಕ್ ಹೇಳಿಕೆ ಖಂಡಿಸಿರುವ ಕೆಪಿಸಿಸಿ ವಕ್ತಾರ ಎಚ್ ಎ ವೆಂಕಟೇಶ್, ದೇಶದ ಸಂಕಷ್ಟ ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳದೆ ರಾಜ್ಯದ ಮಸ್ಕಿ, ಬಸವಕಲ್ಯಾಣ ಹಾಗೂ ಬೆಳಗಾವಿ ಲೋಕಸಭಾ ಉಪಚುನಾವಣೆ ಸೇರಿದಂತೆ ಯಾವುದೇ ಚುನಾವಣೆಗೆ ಕೇಂದ್ರ ಸರ್ಕಾರ ಅವಕಾಶ ನೀಡಬಾರದಾಗಿತ್ತು. ಚುನಾವಣಾ ಪ್ರಚಾರದಿಂದ ಲಕ್ಷಾಂತರ ಜನರನ್ನು ಒಂದೆಡೆ ಸೇರಿಸಿ ಕೋವಿಡ್ 19 ಹೆಚ್ಚಲು ಬಿಜೆಪಿಯವರು ಕಾರಣೀಭೂತರಾದರು. ಕೋವಿಡ್-19 ಹೆಚ್ಚಳದಿಂದ ರಾಜ್ಯದಲ್ಲಿ ಮುಂದಿನ ಎರಡು ತಿಂಗಳು ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭಗಳನ್ನು ನಡೆಸದಿರಲಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿರುವುದು ಅತ್ಯಂತ ಹಾಸ್ಯಾಸ್ಪದವಾಗಿದೆ ಎಂದು ಹೇಳಿದರು.kpcc-spokesperson-h-a-venkatesh-condemns-statement-minister-r-ashok

ರಾಜ್ಯದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿರುವಾಗ ಉದ್ಘಾಟನೆ, ಶಂಕುಸ್ಥಾಪನೆಯ ಪ್ರಶ್ನೆ ಉದ್ಭವಿಸುವುದಿಲ್ಲ . ಹೀಗಿರುವಾಗ ಸಚಿವರ ಹೇಳಿಕೆ ಅರ್ಥವಿಲ್ಲದ್ದು. ಪ್ರತಿನಿತ್ಯ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿರುವ ಬಿಜೆಪಿ ಸಚಿವರ ಬಾಯಲ್ಲಿ ಇಂತಹ ಹೇಳಿಕೆಗಳು ದ್ವಂದ್ವ ನೀತಿಯನ್ನು ತಿಳಿಸುತ್ತದೆ ಎಂದು ಎಚ್.ಎ ವೆಂಕಟೇಶ್ ಹೇಳಿದ್ದಾರೆ.

Key words: KPCC -spokesperson -H A Venkatesh- condemns – statement – Minister -R Ashok.