ಬಿಜೆಪಿ ಶಾಸಕನ ಮನೆ ಮುಂದೆ ನಿಲ್ಲಿಸಿದ್ಧ ಎರಡು ಐಷಾರಾಮಿ ಕಾರುಗಳಿಗೆ ದುಷ್ಕರ್ಮಿಗಳಿಂದ ಬೆಂಕಿ.

ಬೆಂಗಳೂರು, ಆಗಸ್ಟ್ 12,2021(www.justkannada.in):  ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಮನೆಮುಂದೆ ನಿಲ್ಲಿಸಿದ್ದ 2 ಐಷಾರಾಮಿ ಕಾರುಗಳಿಗೆ  ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ನಡೆದಿದೆ.

ಬೊಮ್ಮನಹಳ್ಳಿಯಲ್ಲಿರುವ ಸತೀಶ್ ರೆಡ್ಡಿ ಮನೆ ಮುಂಭಾಗದಲ್ಲಿದ್ದ ಕಾರುಗಳಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದು 2 ಕಾರುಗಳು ಸುಟ್ಟು ಕರಕಲಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ. ಫಾರ್ಚೂನರ್ ಸೇರಿ ಎರಡು ಕಾರುಗಳೂ ಸುಟ್ಟು ಕರಕಲಾಗಿವೆ. ಬೆಂಕಿ ಹಚ್ಚಿದವರು ಯಾರು ಎನ್ನುವ ಬಗ್ಗೆ ಇಲ್ಲಿಯ ತನಕ ಸುಳಿವು ಸಿಕ್ಕಿಲ್ಲ. ರಾಜಕೀಯ ದ್ವೇಷಕ್ಕಾಗಿ ಬೆಂಕಿ ಹಚ್ಚಲಾಗಿದೆಯಾ? ವೈಯಕ್ತಿಕ ಕಾರಣಗಳೇನಾದರೂ ಇವೆಯಾ? ಎನ್ನುವುದು ತನಿಖೆಯಿಂದ ಗೊತ್ತಾಗಬೇಕಿದೆ. ಘಟನೆಯ ನಂತರ ಪೊಲೀಸರಿಗೆ ಸತೀಶ್ ರೆಡ್ಡಿ ಮಾಹಿತಿ ನೀಡಿದ್ದು, ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆ ಕುರಿತು ಮಾತನಾಡಿರುವ ಶಾಸಕ ಸತೀಶ್ ರೆಡ್ಡಿ, ನನಗೆ ರಾಜಕೀಯ ವೈರಿಗಳಿಲ್ಲ. ರಾಜಕೀಯ ದ್ವೇಷಕ್ಕಾಗಿ ನಡೆದಿದೆಯಾ ಅನ್ನೋದು ಗೊತ್ತಿ.ಲ್ಲ.  ಈ ಘಟನೆಯನ್ನ ರಾಜಕೀಯವಾಗಿ ತೆಗೆದುಕೊಳ್ಳಲ್ಲ. ಎರಡು ಕಾರುಗಳು ಶೇ. 80ರಷ್ಟು ಸುಟ್ಟು ಹೋಗಿವೆ. ಏನೇ ಇದ್ದರೂ ಡೈರಕ್ಟ್ ಆಗಿ ಬಂದು ಮಾಡಲಿ. ಹೀಗೆ ಇಲಿಗಳಂತೆ ಹಿಂದೆ ಬಂದು ಬೆಂಕಿ ಹಚ್ಚೋದಲ್ಲ ಎಂದು ಕಿಡಿಕಾರಿದರು.

ENGLISH SUMMARY….

Two luxury cars in front of BJP MLAs house set on fire
Bengaluru, August 12, 2021 (www.justkannada.in): Miscreants have set two luxury cars on fire belonging to Bommanahalli BJP MLA Satish Reddy parked in front of his house.
According to sources, both the cars, including one Toyota Fortuner have burnt beyond recognition. However, there is still no clue about the miscreants. The reason for setting the vehicles on fire is yet to be ascertained by the police investigation. Additional Commissioner of Police Murugan visited the spot and investigated following a complaint by Satish Reddy.
Speaking about the incident MLA Satish Reddy informed, that he do not have any enemies and also said he is unaware about any political enmity or grudge. He also said, “if anyone has any problem they should come and talk face-to-face, no one should come from behind and set fire on valuables,” he added.
Keywords: Bommanahalli BJP MLA/ Satish Reddy/ luxury cars/ set on fire

Key words: Two- luxury -cars – fire – BJP MLA-Sathish reddy-house