ವಿ.ಡಿ ಸಾವರ್ಕರ್ ಫೋಟೊ ಸುಟ್ಟಿದ್ಧ 12 ಕಾಂಗ್ರೆಸ್ ಮುಖಂಡರ ವಿರುದ್ಧ ಎಫ್ ಐಆರ್ ದಾಖಲು.

ಧಾರವಾಡ,ಆಗಸ್ಟ್,20,2022(www.justkannada.in):   ಪ್ರತಿಭಟನೆ ವೇಳೆ ಸ್ವಾತಂತ್ರ ಹೋರಾಟಗಾರ ವಿ.ಡಿ ಸಾವರ್ಕರ್ ಫೋಟೊ ಸುಟ್ಟಿದ್ಧ 12 ಕಾಂಗ್ರೆಸ್ ಮುಖಂಡರ ವಿರುದ್ಧ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಜರಂಗದಳದ  ಕಾರ್ಯಕರ್ತ ಶಿವಾನಂದ ಅವರ ದೂರು ಆದರಿಸಿ ಕಾಂಗ್ರೆಸ್ 12 ಮುಖಂಡರ ವಿರುದ್ಧ ಎಫ್ ಐಆರ್ ದಾಖಲಾಗಿದೆ. ನಿನ್ನೆ ಡಿಸಿ ಕಚೇರಿ ಎದುರು ನಡೆದಿದ್ದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರು  ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಪ್ರತಿಕೃತಿ ದಹನ  ಮಾಡಿದ್ದರು. ಈ ವೇಳೆ ಸಾವರ್ಕರ್ ಫೋಟೊವನ್ನೂ ಸುಟ್ಟಿದ್ದರು.

ಇನ್ನು  ಎಫ್ ಐಆರ್ ನಲ್ಲಿ ಅರವಿಂದ ಏಗನಗೌಡರ ಎ.1 ಆರೋಪಿಯಾಗಿದ್ದು,  ಧಾರವಾಡ ಕ್ರಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ಅನೀಲ್ ಕುಮಾರ್,  ಅಲ್ತಾಪ್ ಹಳ್ಳೂರ  ಅವರ ಹೆಸರಿದೆ.  ಎಫ್ ಐಆರ್ ನಲ್ಲಿರುವ ಬಹುತೇಕರು ವಿನಯ್ ಕುಲಕರ್ಣಿ ಆಪ್ತರು ಎನ್ನಲಾಗಿದೆ.

Key words: VD Savarkar- photo-burnt- FIR -filed -against -12 Congress leaders.