ಯೂಟ್ಯೂಬ್’ನಲ್ಲಿ ದಾಖಲೆ ಬರೆದ ಅಪ್ಪು ‘ಗಂಧದ ಗುಡಿ’!

ಬೆಂಗಳೂರು, ಅಕ್ಟೋಬರ್ 10, 2022 (www.justkannada.in): ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ‘ಗಂಧದ ಗುಡಿ’ ಸಾಕ್ಷ್ಯಚಿತ್ರದ ಟ್ರೈಲರ್ ದಾಖಲೆ ಬರೆದಿದೆ.

ಹೌದು ನಿನ್ನೆ ಬಿಡುಗಡೆಯಾಗಿದ್ದ ‘ಗಂಧದ ಗುಡಿ’ ಟೀಸರ್ ಯುಟ್ಯೂಬ್ ನಲ್ಲಿ ದಾಖಲೆ ಬರೆದಿದೆ.

ಟ್ರೈಲರ್ ಗೆ ಯೂ ಟ್ಯೂಬ್ ನಲ್ಲಿ ಭರ್ಜರಿ ವೀಕ್ಷಣೆ ಸಿಕ್ಕಿದೆ. ಬಿಡುಗಡೆಯಾದ ಒಂದೇ ದಿನಕ್ಕೆ 1 ಕೋಟಿ ವ್ಯೂಸ್ ಆಗಿದೆ.

ಪಿಆರ್ ಕೆ ಪ್ರೊಡಕ್ಷನ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾದ ಈ ಸಾಕ್ಷ್ಯಚಿತ್ರವನ್ನು ಸಿನಿಮಾ ಲೆವೆಲ್ ಗೆ ಜನ ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.