Sunday, August 23, 2026

BDA Apartments

Home Front Page ಬೆಳಗಾವಿ ಹಿಂದೂತ್ವದ ಕೇಂದ್ರ: ಮುಸಲ್ಮಾನರಿಗಂತೂ ಟಿಕೆಟ್ ಕೊಡಲ್ಲ ಎಂದ ಸಚಿವ ಕೆ.ಎಸ್ ಈಶ್ವರಪ್ಪ…

ಬೆಳಗಾವಿ ಹಿಂದೂತ್ವದ ಕೇಂದ್ರ: ಮುಸಲ್ಮಾನರಿಗಂತೂ ಟಿಕೆಟ್ ಕೊಡಲ್ಲ ಎಂದ ಸಚಿವ ಕೆ.ಎಸ್ ಈಶ್ವರಪ್ಪ…

ಬೆಳಗಾವಿ,ನವೆಂಬರ್,28,2020(www.justkannada.in):  ಬೆಳಗಾವಿ ಹಿಂದೂತ್ವದ ಕೇಂದ್ರ, ಹೀಗಾಇ ಇಲ್ಲಿ ಯಾವುದೇ ಕಾರಣಕ್ಕೂ ಮುಸ್ಲಿಮರಿಗೆ ಟಿಕೆಟ್ ಕೊಡುವ‌ ಪ್ರಶ್ನೆ ಬರಲ್ಲ. ಬೆಳಗಾವಿ ಲೋಕಸಭಾ ಟಿಕೆಟ್ ಹಿಂದೂತ್ವವಾದಿಗಳಿಗೆ ಕೊಡ್ತೀವಿ. ಮುಸಲ್ಮಾನರಿಗಂತೂ ಟಿಕೆಟ್ ಕೊಡಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.I didn't knew CM BSY will think so cheaply - KPCC President D.K. Shivakumar

ಬೆಳಗಾವಿ ಲೋಕಸಭಾ ಕ್ಷೇತ್ರ ಬಿಜೆಪಿ ಟಿಕೆಟ್ ಕುರುಬ ಸಮುದಾಯಕ್ಕೆ ನೀಡಬೇಕೆಂಬ ಆಗ್ರಹ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಬಿಜೆಪಿಯಲ್ಲಿ ಕುರುಬ ಸಮಾಜ, ಲಿಂಗಾಯತ ಸಮಾಜ, ಒಕ್ಕಲಿಗ ಸಮಾಜ, ಬ್ರಾಹ್ಮಣ ಸಮಾಜ ಅಂತಾ ಪ್ರಶ್ನೆ ಇಲ್ಲ. ಎಲ್ಲಾ ಒಟ್ಟಿಗೆ ಕುಳಿತು ರಾಷ್ಟ್ರದ ನಾಯಕರ ಜೊತೆ ಚರ್ಚೆ‌ ಮಾಡ್ತೀವಿ. ಯಾರು ಜನರ ಮಧ್ಯೆ ಗೆಲ್ತಾರೆ ಅಂತವರನ್ನ ಹುಡುಕಿ ಗೆಲ್ಲಿಸ್ತೀವಿ ಎಂದರು.

ಕಾಂಗ್ರೆಸ್ ಪಕ್ಷದವರು ಕುರುಬರಿಗೆ ಬಹಳ ಟಿಕೆಟ್ ಕೊಟ್ರಲ್ಲ ಎಷ್ಟು ಗೆದ್ರು?. ನಾನು ಕುರುಬರಿಗೆ ಮೂರು ಟಿಕೆಟ್ ಕೊಟ್ಟಿದೀನಿ, ಈಶ್ವರಪ್ಪ ಎಷ್ಟು ಕೊಟ್ರು ಅಂತಾ ಕೇಳಿದರಲ್ಲ. ಡಿಪಾಜಿಟ್ ಕಳದುಕೊಳ್ಳೋಕೆ ಟಿಕೆಟ್ ಕೊಡಬೇಕೇನು..? ಎಂದು ಲೇವಡಿ ಮಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಬೆಳಗಾವಿ ಲೋಕಸಭಾ ಟಿಕೆಟ್ ಕುರುಬರಿಗೆ ಕೊಡ್ತಿವೋ, ಲಿಂಗಾಯತರಿಗೆ ಕೊಡ್ತಿವೋ, ಒಕ್ಕಲಿಗರಿಗೆ ಕೊಡ್ತಿವೋ, ಬ್ರಾಹ್ಮಣರಿಗೆ ಕೊಡ್ತಿವೋ. ಮುಸಲ್ಮಾನರಿಗಂತೂ ಟಿಕೆಟ್ ಕೊಡಲ್ಲ . ಬೆಳಗಾವಿ ಹಿಂದೂತ್ವದ ಕೇಂದ್ರ, ಇಲ್ಲಿ ಯಾವುದೇ ಕಾರಣಕ್ಕೂ ಮುಸ್ಲಿಮರಿಗೆ ಟಿಕೆಟ್ ಕೊಡುವ ಪ್ರಶ್ನೆ ಬರಲ್ಲ ಎಂದು ಸ್ಪಷ್ಟನೆ ನೀಡಿದರು.

ಬೆಳಗಾವಿ ಲೋಕಸಭಾ ಟಿಕೆಟ್ ಹಿಂದೂತ್ವವಾದಿಗಳಿಗೆ ಕೊಡ್ತೀವಿ. ರಾಯಣ್ಣ ಶಿಷ್ಯಂದರಿಗೆ ಕೊಡ್ತೀವೋ, ಚೆನ್ನಮ್ಮ ಶಿಷ್ಯಂದರಿಗೆ ಕೊಡ್ತೀವೋ ಶಂಕರಾಚಾರ್ಯ ಶಿಷ್ಯಂದರಿಗೆ ಕೊಡ್ತಿವೋ ಗೊತ್ತಿಲ್ಲ ನನಗೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.belgavi-mp-by-election-hinduism-minister-ks-eshwarappa-ticket-not-muslims

ಇದೇ ವೇಳೆ ಸಿದ್ಧರಾಮಯ್ಯ ವಿರುದ್ದ ವ್ಯಂಗ್ಯವಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಸಿದ್ದರಾಮಯ್ಯ ವರ್ಚಸ್ಸು ಎಲ್ಲಿದೆ, ಆರ್ ಆರ್ ನಗರ ಶಿರಾ ಕ್ಷೇತ್ರದಲ್ಲಿ ಏನಾಯ್ತು…?  ಕಾಂಗ್ರೆಸ್ ಇಲ್ಲ ಪಾಪ ಸಿದ್ದರಾಮಯ್ಯ ಎಲ್ಲಿ. ಈಗಲೂ ಸಿಎಂ, ಮುಂದೆಯೂ ಸಿಎಂ ಅಂತ ಸಿದ್ದರಾಮಯ್ಯ ಹೇಳಿದ್ರು ಈಗ ಎಲ್ಲಿದಾರೆ. ಬಾದಾಮಿಯಲ್ಲಿ ಹೆಚ್ಚು ಕಡಿಮೆ ಆಗಿದ್ರೆ ರಾಜಕಾರಣದಲ್ಲಿಯೇ ಇರ್ತಿರಲಿಲ್ಲ ಅವರು. ರಾಜಕೀಯವಾಗಿ ನಾವು ಬದುಕಿದ್ದೀವಿ ಅಂತಾ ತೋರಿಸೋಕೆ ಏನೇನೋ ಹೇಳಿಕೆ ಕೊಡ್ತಿದಾರೆ ಎಂದು ಟಾಂಗ್ ನೀಡಿದರು.

Key words: Belgavi- MP –by election- Hinduism-Minister -KS Eshwarappa – ticket – not – Muslims.