Tuesday, September 29, 2026

BDA Apartments

ಆಡಿಯೋ ವೈರಲ್ ವಿಚಾರ: ನಾನು ಏನೂ ಮಾತನಾಡಲ್ಲ- ಮಾಜಿ ಸಿಎಂ ಸದಾನಂದಗೌಡ BDA JK_Adv BDA Adv
Home Front Page ಆಡಿಯೋ ವೈರಲ್ ವಿಚಾರ: ನಾನು ಏನೂ ಮಾತನಾಡಲ್ಲ- ಮಾಜಿ ಸಿಎಂ ಸದಾನಂದಗೌಡ

ಆಡಿಯೋ ವೈರಲ್ ವಿಚಾರ: ನಾನು ಏನೂ ಮಾತನಾಡಲ್ಲ- ಮಾಜಿ ಸಿಎಂ ಸದಾನಂದಗೌಡ

ಬೆಂಗಳೂರು,ಜೂನ್,29,2026 (www.justkannada.in): ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ತೆಗೆದುಹಾಕುವಂತೆ ದೆಹಲಿ ನಾಯಕರಿಗೆ ಒತ್ತಾಯಿಸಿರುವ  ಮಾಜಿ ಸಿಎಂ ಡಿವಿ ಸದಾನಂದ ಗೌಡ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದೆ.

ಈ ವಿಚಾರ ಕುರಿತು ಮಾತನಾಡಿರುವ  ಮಾಜಿ ಸಿಎಂ ಡಿ.ವಿ ಸದಾನಂದಗೌಡರು,  ಆರೋಪ ಮಾಡುವವರು ಸಾವಿರ ಜನ ಇರುತ್ತಾರೆ.  ಹಾಗಂತ ಅವರಿಗೆಲ್ಲಾ ಉತ್ತರ ಕೊಟ್ಟು ಸಾಯುವ ವ್ಯಕ್ತಿ ನಾನಲ್ಲ . ನಾನು ಕಳ್ಳನಾಗಿದ್ದರೇ ಬಾಗಿಲು ಹಾಕಿ ನಿಮ್ಮನ್ನ ಹೊರಗೆ ಇರುಸುತ್ತಿದ್ದೆ.  ಆಡಿಯೋ ಬಗ್ಗೆ ನಾನು ಏನು ಮಾತನಾಡುವುದಕ್ಕೆ ಹೋಗಲ್ಲ.  ಯಾರ ಜೊತೆಗೂ ನಾನು ಹೋಗಿ ಮಾತನಾಡಲ್ಲ. ರಾಷ್ಟ್ರೀಯ ನಾಯಕರು ಕೇಳಿದರೇ ಮಾತ್ರ ಹೋಗಿ ಹೇಳುತ್ತೇನೆ.  ಆ ಆಡಿಯೋ ಬಗ್ಗೆ ಸತ್ಯಾಸತ್ಯತೆ ಬಗ್ಗೆ ಮಾಧ್ಯಮಗಳೇ ಪತ್ತೆ ಹಚ್ಚಿ ಎಂದರು.ಆಡಿಯೋ ವೈರಲ್ ವಿಚಾರ BDA JK_Adv BDA Adv

ಬಿಜೆಪಿ ರಾಷ್ಟ್ರೀಯ ನಾಯಕರೊಬ್ಬರ ಜೊತೆಗೆ ಡಿವಿ ಸದಾನಂದಗೌಡ ಅವರು ಸಂಭಾಷಣೆ  ನಡೆಸಿದ್ದಾರೆ ಎನ್ನಲಾದ ಆಡಿಯೋದಲ್ಲಿ ಮೂರು ತಿಂಗಳ ಬಳಿಕ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಕೆಳಗಿಳಿಸಿ ಎಂದು ಎಂಬ ಬೇಡಿಕೆ ಇಡಲಾಗಿದೆ.ನಾನು ಏನೂ ಮಾತನಾಡಲ್ಲ jk02_new jk02 new

Key words: Audio, viral issue, Former CM,  Sadananda Gowda