Tuesday, September 15, 2026

BDA Apartments

Home Front Page ನಾನು ಮೊದಲ ಬಾರಿ ಸಭಾನಾಯಕನಾಗಿದ್ದೇನೆ: ವಿಪಕ್ಷಗಳನ್ನ ಎದುರಿಸಲು ಸಿದ್ದ-ಸಚಿವ ಯತೀಂದ್ರ ಸಿದ್ದರಾಮಯ್ಯ

ನಾನು ಮೊದಲ ಬಾರಿ ಸಭಾನಾಯಕನಾಗಿದ್ದೇನೆ: ವಿಪಕ್ಷಗಳನ್ನ ಎದುರಿಸಲು ಸಿದ್ದ-ಸಚಿವ ಯತೀಂದ್ರ ಸಿದ್ದರಾಮಯ್ಯ

ಬೆಂಗಳೂರು,ಆಗಸ್ಟ್,13,2026 (www.justkannada.in):  ನಾನು ಮೊದಲ ಬಾರಿಗೆ ಸಚಿವನಾಗಿದ್ದೇನೆ . ಮೊದಲ ಬಾರಿಗೆ ಸಭಾನಾಯಕನಾಗಿದ್ದೇನೆ. ವಿಪಕ್ಷಗಳನ್ನ ಎದುರಿಸಲು ಸರ್ಕಾರ ಸಿದ್ಧವಾಗಿದೆ ಎಂದು ನಗರಾಭಿವೃದ್ದಿ ಸಚಿವ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ಇಂದಿನಿಂದ ವಿಧಾನಮಂಡಲ ಮುಂಗಾರು ಅಧಿವೇಶನ ಆರಂಭವಾಗಿದ್ದು ಈ ಸಂಬಂಧ ಮಾತನಾಡಿದ ಸಚಿವ ಯತೀಂದ್ರ ಸಿದ್ದರಾಮಯ್ಯ, ನಾನು ಮೊದಲ ಬಾರಿ ಸಭಾನಾಯಕನಾಗಿದ್ದೇನೆ ವಿಪಕ್ಷಗಳನ್ನು ಎದುರಿಸಲು ಸರ್ಕಾರ ಸಿದ್ದವಾಗಿದೆ.   ಬಿಡದಿ ನಾಗೇಂದ್ರ ವಿಚಾರದಲ್ಲಿ ಚರ್ಚೆಯಾಗಿದೆ.  ಸಹಜವಾಗಿಯೇ ಸವಾಲು ಇದೆ. ಎಲ್ಲದಕ್ಕೂ ತಂದೆಯ ಸಲಹೆ ಪಡೆಯಲು ಸಾಧ್ಯವಿಲ್ಲ. ಹಿರಿಯ ಶಾಸಕರ ಸಲಹೆ ಪಡೆಯುತ್ತೇನೆ  . ಸಿಎಂ ಕೂಡ ಸಲಹೆ ನೀಡಿದ್ದಾರೆ ಎಂದರು.ನಾನು ಮೊದಲ ಬಾರಿ ಸಭಾನಾಯಕನಾಗಿದ್ದೇನೆ session session 1

ವಿಧಾನ ಪರಿಷತ್​​ ಕಲಾಪದಲ್ಲಿ  ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನು ನೂತನ ಸಭಾ ನಾಯಕರೆಂದು ಹಂಗಾಮಿ ಸಭಾಪತಿ ಪುಟ್ಟಣ್ಣ ಘೋಷಣೆ ಮಾಡಿದರು. ಆ ಬಳಿಕ ಕಲಾಪವನ್ನು ಉದ್ದೇಶಿಸಿ ಮಾತನಾಡಿದ ಯತೀಂದ್ರ ಅವರು, ಮೊದಲ ಬಾರಿ ಸಚಿವನಾಗಿ, ಸಭಾನಾಯಕನಾಗಿ ಆಯ್ಕೆ ಆಗಿದ್ದೇನೆ. ಅನುಭವ ಕಡಿಮೆ ಇರುವ ಕಾರಣ ಏನಾದರೂ ತಪ್ಪಾದರೆ ಸರಿಪಡಿಸಿ ಮಾರ್ಗದರ್ಶನ ನೀಡುವಂತೆ ಆಡಳಿತ ಮತ್ತು ವಿಪಕ್ಷ ಸದಸ್ಯರನ್ನು ಅವರು ಮನವಿ ಮಾಡಿದರು.ವಿಪಕ್ಷಗಳನ್ನ ಎದುರಿಸಲು ಸಿದ್ದ jk02_new jk02 new

Key words: Session, Minister, Yathindra Siddaramaiah. Ready, face,  opposition Party