Tuesday, September 29, 2026

BDA Apartments

ಕಾವೇರಿ ನೀರು ಹರಿಸುವಂತೆ ಆದೇಶಕ್ಕೆ ಖಂಡನೆ: ಮೈಸೂರಿನಲ್ಲಿ ಪೊರಕೆ ಹಿಡಿದು ಪ್...
Home Front Page ಕಾವೇರಿ ನೀರು ಹರಿಸುವಂತೆ ಆದೇಶಕ್ಕೆ ಖಂಡನೆ: ಮೈಸೂರಿನಲ್ಲಿ ಪೊರಕೆ ಹಿಡಿದು ಪ್ರತಿಭಟನೆ

ಕಾವೇರಿ ನೀರು ಹರಿಸುವಂತೆ ಆದೇಶಕ್ಕೆ ಖಂಡನೆ: ಮೈಸೂರಿನಲ್ಲಿ ಪೊರಕೆ ಹಿಡಿದು ಪ್ರತಿಭಟನೆ

ಮೈಸೂರು,ಆಗಸ್ಟ್,,13,2026 (www.justkannada.in): ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ ನೀಡಿರುವ ಆದೇಶವನ್ನ ಖಂಡಿಸಿ ಮೈಸೂರಿನಲ್ಲಿ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕಾಡಾ ಕಚೇರಿ ಮುಂದೆ ಜಮಾಯಿಸಿದ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಪೊರಕೆ ಹಿಡಿದು ತಮಿಳುನಾಡು ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ  ಧರಣಿ ನಡೆಸಿ ಆಕ್ರೋಶ  ವ್ಯಕ್ತಪಡಿಸಿದರು.ಕಾವೇರಿ ನೀರು ಹರಿಸುವಂತೆ ಆದೇಶಕ್ಕೆ ಖಂಡನೆ cwrc

ತಮಿಳುನಾಡಿಗೆ ನೀರು ಹರಿಸದಂತೆ ಆಗ್ರಹಿಸಿ  ಇಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದ್ದು ಬಂದ್ ಕೇವಲ ಪ್ರತಿಭಟನೆಗೆ ಸೀಮಿತವಾಗಿದೆ. ಮಂಡ್ಯದಲ್ಲಿ ಕಾವೇರಿ ಕಿಚ್ಚು ಹೆಚ್ಚಾಗಿದ್ದು ಮೈಸೂರಿನಲ್ಲೂ ಪ್ರತಿಭಟನೆ ಜೋರಾಗಿದೆ.ಮೈಸೂರಿನಲ್ಲಿ ಪೊರಕೆ ಹಿಡಿದು ಪ್ರತಿಭಟನೆ jk02_new jk02 new

Key words: Protest, Mysore, against, order, release, Cauvery water