Monday, September 28, 2026

BDA Apartments

ರಾಜ್ಯ ವಿಧಾನಮಂಡಲ ಅಧಿವೇಶನ ಆರಂಭ: ಅಗಲಿದ ಗಣ್ಯರಿಗೆ ಸಂತಾಪ BDA JK_Adv BDA Adv
Home Front Page ರಾಜ್ಯ ವಿಧಾನಮಂಡಲ ಅಧಿವೇಶನ ಆರಂಭ: ಅಗಲಿದ ಗಣ್ಯರಿಗೆ ಸಂತಾಪ

ರಾಜ್ಯ ವಿಧಾನಮಂಡಲ ಅಧಿವೇಶನ ಆರಂಭ: ಅಗಲಿದ ಗಣ್ಯರಿಗೆ ಸಂತಾಪ

ಬೆಂಗಳೂರು,ಆಗಸ್ಟ್,13,2026 (www.justkannada.in): ರಾಜ್ಯ  ವಿಧಾನಮಂಡಲ ಮುಂಗಾರು ಅಧಿವೇಶನ ಆರಂಭವಾಗಿದ್ದು ಅಗಲಿದ ಗಣ್ಯರಿಗೆ  ಸಂತಾಪ ಸೂಚಿಸಲಾಯಿತು.

ಡಿಕೆ ಶಿವಕುಮಾರ್ ಸಿಎಂ ಆದ ಬಳಿಕ ಮೊದಲ ಅಧಿವೇಶನ ಇದಾಗಿದ್ದು ಹಂಗಾಮಿ ಸ್ಪೀಕರ್ ಆಗಿ ಟಿ.ಬಿ ಜಯಚಂದ್ರ ಅವರು ವಿಧಾನಸಭೆ ಕಲಾಪ ಆರಂಭಿಸಿದರು. ನಂತರ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲು ವಿಪಕ್ಷ ನಾಯಕ ಒತ್ತಾಯಿಸಿದರು.ರಾಜ್ಯ ವಿಧಾನಮಂಡಲ ಅಧಿವೇಶನ ಆರಂಭ session session 1

ಅಂತೆಯೇ ಇತ್ತಿಚೆಗೆ ನಿಧನರಾದ ಮಾಜಿ ಸಚಿವ ಡಿ. ಸುಧಾಕರ್, ಮಾಜಿ ಡೆಪ್ಯೂಟಿ ಸ್ಪೀಕರ್ ಸಿ. ವೀರಣ್ಣ ಮಾಜಿ ಸಚಿವ ವೆಂಕಟರಮಣಪ್ಪ, ಮಾಜಿ ಶಾಸಕ ಕೆಆರ್ ಶ್ರೀನಿವಾಸಯ್ಯ, ಎಸ್ ಎಚ್ ಪುಟ್ಟ ರಂಗನಾಥ್  ವಿ.ಶ್ರೀನಿವಾಸನ್,  ಆರ್ ಸಿ ವೆಂಕಟಾಚಲಯ್ಯ,  ಎಸ್ ಕೃಷ್ಣಪ್ಪ,   ಹಿನ್ನೆಲೆ ಗಾಯಕರಾಗಿದ್ದ ಎಸ್.  ಜಾನಕಿ, ಆಶಾ ಬೋಸ್ಲೆ  ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಪತ್ನಿ ಚೆನ್ನಮ್ಮರಿಗೆ ಸಂತಾಪ ಸೂಚಿಸಲಾಯಿತು.ಅಗಲಿದ ಗಣ್ಯರಿಗೆ ಸಂತಾಪ jk02_new jk02 new

ಇನ್ನು ನಾಳೆ ಸ್ಪೀಕರ್ ಆಯ್ಕೆಗೆ ಚುನಾವಣೆ ನಡೆಯಲಿದ್ದು ಸೋಮವಾರದಿಂದ ಪ್ರಶ್ನೋತ್ತರ ಕಲಾಪಗಳು ಆರಂಭವಾಗಲಿದೆ.

Key words: State, Legislative session, begins,