Monday, September 28, 2026

BDA Apartments

BJP BDA JK_Adv BDA Adv
Home Front Page ದಕ್ಷಿಣ ಕನ್ನಡ ಜಿಲ್ಲೆಗೆ ಬಿಜೆಪಿ ಕೊಡುಗೆಯೇನು? ಸಚಿವ ಯುಟಿ ಖಾದರ್ ವಾಗ್ದಾಳಿ

ದಕ್ಷಿಣ ಕನ್ನಡ ಜಿಲ್ಲೆಗೆ ಬಿಜೆಪಿ ಕೊಡುಗೆಯೇನು? ಸಚಿವ ಯುಟಿ ಖಾದರ್ ವಾಗ್ದಾಳಿ

ಮಂಗಳೂರು, ಸೆಪ್ಟೆಂಬರ್,​​ 28,2026 (www.justkannada.in):  ಮೊದಲ ಬಾರಿಗೆ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಿ 32,611 ಕೋಟಿ ರೂ ಅನುದಾನ ಘೋಷಿಸಿದ್ದಲ್ಲದೆ ರಾಜ್ಯದ 2ನೇ ಅಧಿಕೃತ ಭಾಷೆಯಾಗಿ ತುಳುಗೆ ಮಾನ್ಯತೆ ಸಹ  ನೀಡಲಾಗಿದ್ದು ಇದೇ ವಿಚಾರವನ್ನಿಟ್ಟುಕೊಂಡು ಆರೋಗ್ಯ ಸಚಿವ ಯು.ಟಿ ಖಾದರ್ ಅವರು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಯು.ಟಿ ಖಾದರ್, ‘ಬಿಜೆಪಿ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಏನು ಕೊಡುಗೆ ನೀಡಿದೆ. ಬಿಜೆಪಿ ಜಿಲ್ಲೆಯಲ್ಲಿ ಕನಿಷ್ಠ ಸಂಪುಟ ಸಭೆ ಏನಾದರೂ ನಡೆಸಿದ್ದಾರೆಯೇ? ಯಾವುದಾದರೂ ಪ್ರಮುಖ ಯೋಜನೆ ರೂಪಿಸಿದ್ದಾರೆಯೇ? ನಾವು ಯಾರದ್ದೋ ಮಾತು ಕೇಳಿ ಕೆಲಸ ಮಾಡುವುದಿಲ್ಲ. ಜನರಿಗಾಗಿ ಕೆಲಸ ಮಾಡುತ್ತೇವೆ’ ಎಂದು ಗುಡುಗಿದರು.BJP ut kadhar

ಸಚಿವ ಸಂಪುಟ ಸಭೆಯಲ್ಲಿ ಮಾಡಲಾದ ಘೋಷಣೆಗಳ ಬಗ್ಗೆ  ಬಿಜೆಪಿ ಟೀಕೆ ಕುರಿತು ಪ್ರತಿಕ್ರಿಯಿಸಿದ ಸಚಿವ ಯು.ಟಿ ಖಾದರ್, ‘ಸಿಎಂ ಘೋಷಿಸಿರುವ ಯೋಜನೆಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಸರ್ಕಾರದ್ದಾಗಿದೆ. ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಾಡಲಾದ ಘೋಷಣೆಗಳನ್ನು ಅನುಷ್ಠಾನಕ್ಕೆ ತರುವುದು ನನ್ನ ಜವಾಬ್ದಾರಿ ಎಂದರು.contribution jk02_new jk02 new

‘ಆರ್ಥಿಕ ಇಲಾಖೆಯು ಸರ್ಕಾರಕ್ಕೆ ಸಲಹೆ, ಎಚ್ಚರಿಕೆ ನೀಡುವುದು ಸಹಜ. ಇದು ಎಲ್ಲಾ ಸರ್ಕಾರದ ಅವಧಿಯಲ್ಲೂ ನಡೆಯುತ್ತಾ ಬಂದಿರುವ ಪ್ರಕ್ರಿಯೆ, ಆದರೆ ಕ್ಯಾಬಿನೆಟ್‌ಗೆ ತನ್ನದೇ ಆದ ಜವಾಬ್ದಾರಿ ಇದೆ. ಸರ್ಕಾರ ನೀಡಿದ ಮಾತನ್ನು ಈಡೇರಿಸುವುದು ಸರ್ಕಾರಕ್ಕೆ ಗೊತ್ತಿದೆ ಎಂದರು.

 

English Summary
Title

UT Khader Slams BJP Over Lack of Development and Communal Politics in Dakshina Kannada District

Short Description
Karnataka Minister UT Khader launched a scathing attack on the BJP, questioning its actual contribution to the Dakshina Kannada district. During recent progress review meetings, Khader accused local BJP MLAs and MPs of failing to secure central funds for critical infrastructure like the Shiradi Ghat project. He slammed the opposition for relying on divisive communal politics and weaponizing central agencies instead of fostering growth. While BJP leaders retaliated by alleging state corruption and biased law enforcement, Khader urged them to stop childish politics and focus on the coastal region's genuine grievances.
Keywords
BJP, contribution, Dakshina Kannada, district, Minister, U.T. Khader