Monday, September 28, 2026

BDA Apartments

Mysore dasara- Yuva Dasara BDA JK_Adv BDA Adv
Home Front Page ಅ.13ರಿಂದ ಯುವ ದಸರಾ: ಪ್ರತಿದಿನ ಹೊಸತನ ಸಂಗೀತದ ರಸದೌತಣಕ್ಕೆ ಸಜ್ಜು

ಅ.13ರಿಂದ ಯುವ ದಸರಾ: ಪ್ರತಿದಿನ ಹೊಸತನ ಸಂಗೀತದ ರಸದೌತಣಕ್ಕೆ ಸಜ್ಜು

ಮೈಸೂರು,ಸೆಪ್ಟಂಬರ್,26,2026 (www.justkannada.in): ಯುವ ದಸರಾ 2026 ಕಾರ್ಯಕ್ರಮವು ಪ್ರತಿದಿನ ಹೊಸತನ ಸಂಗೀತದ ರಸದೌತಣ ಎಂಬ ಧೇಯ್ಯವಾಕ್ಯದೊಂದಿಗೆ ಅಕ್ಟೋಬರ್ 13 ರಿಂದ ಅಕ್ಟೋಬರ್ 17 ರವರೆಗೆ ಒಟ್ಟು ಐದು ದಿನಗಳ ಕಾಲಸಂಜೆ 5:30 ರಿಂದ ರಾತ್ರಿ 10:30 ರವರೆಗೆ ಮೈಸೂರು ರಿಂಗ್ ರೋಡ್ ನ ಜ್ವಾಲಾಮುಖಿ ತ್ರಿಪುರಸುಂದರಿ ದೇವಸ್ಥಾನದ ಸಮೀಪ ನಡೆಯಲಿದೆ.

ಅಕ್ಟೋಬರ್ 13 ರಂದು ಖ್ಯಾತ ನೃತ್ಯ ನಿರ್ದೇಶಕ ಹಾಗೂ ನಟ ಪ್ರಭುದೇವ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ನಗರಾಭಿವೃದ್ಧಿ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಖ್ಯಾತ ಕಲಾವಿದರ ಕಾರ್ಯಕ್ರಮಗಳು ಪ್ರತಿದಿನ ರಾತ್ರಿ 7:30 ರಿಂದ 10:30 ರವರೆಗೆ ನಡೆಯಲಿದೆ.

ಅಕ್ಟೋಬರ್ 13 ರಂದು ಹೆಸರಾಂತ ಸಂಗೀತ ನಿರ್ದೇಶಕರಾದ ಅಜನೀಶ್ ಲೋಕನಾಥ್ ಹಾಗೂ ಅವರ ತಂಡದ ಗಾಯಕರಾದ ಆಬಿ.ಬಿ, ನಕಾಶ್ ಅಜೀಜ್, ವಾಸುಕಿ ವೈಭವ್, ಸಾಯಿ ವಿಘ್ನೇಶ್, ಅನನ್ಯಾ ಭಟ್, ಮಂಗಲಿ, ಜಸ್ಕರನ್ ಸಿಂಗ್, ಐಶ್ವರ್ಯ ರಂಗರಾಜನ್, ಗಾಯಕರಾದ ಸಿ.ಆರ್ ಬಾಬಿ,ಹರ್ಷಿಕಾ ದೇವನಾಥ್, ಅನಿರುದ್ದ ಶಾಸ್ತಿç, ಇಂದು ನಾಗರಾಜ್,ಶೇ಼ಷಾಂಕ್ ಶೇಷರಿಗಿ ಇವರುಗಳಿಂದ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ.Mysore dasara- Yuva Dasara mysore dasara mysore dasara 1

ಅಕ್ಟೋಬರ್ 14 ರಂದು ಭಾರತದ ಹೆಸರಾಂತ ಸಂಗೀತ ನಿರ್ದೇಶಕರು ಮತ್ತು ಗಾಯಕರಾದ ಶಂಕರ್-ಎಹಸಾನ್-ಲಾಯ್ ಅವರು ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ.

ಅಕ್ಟೋಬರ್ 15 ರಂದು ಸುಪ್ರಸಿದ್ದ ಬಹುಭಾಷ ಗಾಯಕರಾದ ಸಿಡ್ ಶ್ರೀರಾಮ್ ಇವರಿಂದ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ.

ಅಕ್ಟೋಬರ್ 16 ರಂದು ಸ್ಯಾಂಡಲ್ವುಡ್ ನೈಟ್ಸ್ ವತಿಯಿಂದ ಶಿವರಾಜ್ ಕುಮಾರ್, ರಚಿತಾ ರಾಮ್, ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಚಂದನ್ ಶೆಟ್ಟಿ, All ok,ಅನುರಾಧಾ ಭಟ್, ಮತ್ತು ಹೆಸರಾಂತ ಗಾಯಕರುಗಳಿಂದ ಕಾರ್ಯಕ್ರಮ ನೀಡಲಿದ್ದಾರೆ.from yuvadasara

ಅಕ್ಟೋಬರ್ 17 ರಂದು ಭಾರತದ ಪ್ರಖ್ಯಾತ ಗಾಯಕರಾದ ಜಾಸ್ಮಿನ್ ಸ್ಯಾಂಡ್ಲಾಸ್ ಅವರಿಂದ ಹಾಗೂ ರಸ ಸಂಜೆ ಕಾರ್ಯಕ್ರಮಗಳು ನಡೆಯಲಿದೆ.October 13 jk02_new jk02 new

ಪ್ರತಿದಿನ ಸಂಜೆ 5:30 ರಿಂದ ರಾತ್ರಿ 7:30 ರವರೆಗೆ ಸ್ಥಳೀಯ ಹಾಗೂ ವಿವಿಧ ಭಾಗಗಳ ಆಯ್ಕೆ ಕಲಾವಿದರಿಂದ ಫಿಲ್ಲರ್ ಕಾರ್ಯಕ್ರಮಗಳು ಪ್ರದರ್ಶನಗೊಳ್ಳಲಿವೆ.

 

English Summary
Title

Mysuru Yuva Dasara 2026: Dates, Venue & Star-Studded Lineup | October 13–17

Short Description
Mysuru Yuva Dasara 2026 is set to thrill crowds from October 13 to October 17 as part of the grand Mysuru Dasara festival. To ease city traffic, the massive youth cultural event moves to a sprawling 100-acre venue near Uttanahalli, Mysuru. Renowned artist Prabhu Deva will inaugurate the 5-day festival. Music fans can expect high-octane live concerts featuring a star-studded lineup, including Shankar-Ehsaan-Loy, Sid Sriram, Ajaneesh Loknath, and Jasmine Sandlas. Ahead of the main event, the Yuva Sambhrama student talent show runs from September 28 to October 5 at the Manasagangothri Open Air Theatre.
Keywords
Mysore dasara- Yuva Dasara, from, October 13