Monday, September 28, 2026

BDA Apartments

Dasara Kambala BDA JK_Adv BDA Adv
Home Front Page ದಸರಾ ಕಂಬಳ ಕ್ರೀಡಾಕೂಟದ ಆನ್ಲೈನ್ ನೋಂದಣಿ ಆರಂಭ

ದಸರಾ ಕಂಬಳ ಕ್ರೀಡಾಕೂಟದ ಆನ್ಲೈನ್ ನೋಂದಣಿ ಆರಂಭ

ಮೈಸೂರು, ಸೆಪ್ಟಂಬರ್,28,2026 (www.justkannada.in): ಮೈಸೂರು ದಸರಾ 2026ರ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಭ್ರಮದ ಅಂಗವಾಗಿ ಇದೇ ಮೊದಲ ಬಾರಿಗೆ ಕರಾವಳಿಯ ಜಾನಪದ ಕ್ರೀಡೆಯಾದ ದಸರಾ ಕಂಬಳವನ್ನು ಅದ್ಧೂರಿಯಾಗಿ ಆಯೋಜಿಸಲಾಗುತ್ತಿದೆ. ಈ ಐತಿಹಾಸಿಕ ಕ್ರೀಡಾಕೂಟದ ನೋಂದಣಿ ಪ್ರಕ್ರಿಯೆಯನ್ನು ಸುಲಭಗೊಳಿಸಲು ಆನ್ಲೈನ್ ಪೋರ್ಟಲ್ ಅನ್ನು ಅಧಿಕೃತವಾಗಿ ತೆರೆಯಲಾಗಿದೆ.

ಈ ಬಾರಿಯ ದಸರಾದ ಮುಖ್ಯ ಆಕರ್ಷಣೆಯಾಗಿ ಕಂಬಳವು ಮೈಸೂರಿನ ಸಾತಗಳ್ಳಿ ಹೊರವರ್ತುಲ ರಸ್ತೆಯಲ್ಲಿ (VTU) ನಡೆಯಲಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಬಯಸುವ ಕಂಬಳದ ಕೋಣಗಳ ಮಾಲೀಕರು ಮತ್ತು ಓಡಿಸುವ ಜಾನಪದ ವೀರರು ವಿವಿಧ ಸ್ಪರ್ಧಾ ವಿಭಾಗಗಳ ಅಡಿಯಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು.Dasara Kambala

ಆಸಕ್ತರು ಹೆಚ್ಚಿನ ವಿವರಗಳಿಗಾಗಿ ಮತ್ತು ತಕ್ಷಣದ ನೋಂದಣಿಗಾಗಿ https://kambala.milieumedia.in ಜಾಲತಾಣಕ್ಕೆ ಭೇಟಿ ನೀಡಬಹುದು. ಅರ್ಜಿ ಹಾಗೂ ಪ್ರವೇಶಾತಿಗಳನ್ನು ಸಲ್ಲಿಸಲು ಸೆಪ್ಟೆಂಬರ್ 30 ಕೊನೆಯ ದಿನಾಂಕವಾಗಿದೆ. ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಬಯಸುವವರು ಭೌತಿಕ ಪ್ರತಿಯನ್ನು ಜಿಲ್ಲಾ ಪಂಚಾಯತ್ ಕಚೇರಿಯಿಂದ ಪಡೆದುಕೊಳ್ಳಬಹುದು ಎಂದು ಕಂಬಳ ಉಪ ಸಮಿತಿಯ ಕಾರ್ಯಾಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ (ಅಭಿವೃದ್ಧಿ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.sports jk02_new jk02 new

 

English Summary
Title

Mysuru Dasara Kambala 2026: Online Registration Open till Sept 30

Short Description
Online registration is open for the first-ever Mysuru Dasara Kambala, bringing the thrilling coastal traditional buffalo race to the royal city on October 18-19, 2026. The high-speed sport will feature over 150 elite buffalo pairs competing on a custom 147-metre slush track at Sathagalli. Participants and buffalo owners must submit their applications by the September 30 deadline. Interested racers can register online at the official portal or collect offline forms from the Mysuru Zilla Panchayat office. Don't miss this historic cultural event during the grand Mysuru Dasara Festival celebrations.
Keywords
Dasara Kambala, sports, event, Online registration, begun.