ಹುಲಿಯ ಹಾಲಿನ ಬದಲು, ಮೋರಿ ನೀರನ್ನು ಕುಡಿಸಲು ಹೊರಟಿದ್ದಾರೆ- ಪಠ್ಯ ಪುಸ್ತಕ ಪರಿಷ್ಕರಣೆ ಕುರಿತು ಹೆಚ್.ಸಿ ಮಹದೇವಪ್ಪ ಕಿಡಿ.

ಮೈಸೂರು,ಮೇ,26,2022(www.justkannada.in): ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಮಾಜಿ ಸಚಿವ ಹೆಚ್. ಸಿ.ಮಹಾದೇವಪ್ಪ ಕಿಡಿ ಕಾರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಹೆಚ್.ಸಿ ಮಹದೇವಪ್ಪ,  ಶಿಕ್ಷಣವು ಹುಲಿಯ ಹಾಲಿದ್ದಂತೆ, ಅದನ್ನು ಕುಡಿದವರು ಘರ್ಜಿಸಲೇಬೇಕು, ಎಂದು ಬಾಬಾ ಸಾಹೇಬರು ಹೇಳುತ್ತಿದ್ದರು. ಹೀಗಾಗಿ ಶಿಕ್ಷಣದ ಶಕ್ತಿಯನ್ನು ಅರಿತಿರುವ ಕೋಮುವಾದಿ ದೇಶದ್ರೋಹಿಗಳು, ಹುಲಿಯ ಹಾಲಿನಂತೆ ಘರ್ಜಿಸುವ ಪ್ರೇರಣೆ ನೀಡಬಲ್ಲ ಶಿಕ್ಷಣವನ್ನೇ ಭ್ರಷ್ಟಗೊಳಿಸಲು ಹೊರಟಿದ್ದಾರೆ.

ಹುಲಿಯ ಹಾಲಿನ ಬದಲು, ಮೋರಿ ನೀರನ್ನು ಕುಡಿಸಲು ಹೊರಟಿದ್ದಾರೆ. ಮೋರಿ ನೀರು ಕುಡಿದವರು, ಘರ್ಜಿಸುತ್ತಾರೋ ಇಲ್ಲವೇ ರೋಗಗ್ರಸ್ಥರಾಗಿ ನರಳುತ್ತಾರೋ. ಇದನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಟ್ವೀಟ್ ಮಾಡಿ ಹೆಚ್.ಸಿ ಮಹದೇವಪ್ಪ ಹರಿಹಾಯ್ದಿದ್ದಾರೆ.

Key words: text book- revision-former Minister-HC Mahadevappa