ಮೈಸೂರಿನಲ್ಲಿ ಮೇ.4ರವರೆಗೆ ಅಗತ್ಯ ಸೇವೆ ಬಿಟ್ಟು ಉಳಿದೆಲ್ಲ ಅಂಗಡಿಗಳು ಬಂದ್..

ಮೈಸೂರು,ಏಪ್ರಿಲ್,22,2021(www.justkannada.in): ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆ ಸಾಂಸ್ಕೃತಿಕ ನಗರಿ  ಮೈಸೂರಿನಲ್ಲಿ ಮೇ 4ರ ವರಗೆ ಅಗತ್ಯ ಸೇವೆಗಳನ್ನ ಬಿಟ್ಟು ಉಳಿದೆಲ್ಲ ಅಂಗಡಿಗಳು ಬಂದ್ ಮಾಡಲಾಗಿದೆ.jk

ಮೈಸೂರಿನಲ್ಲಿ ಕೋವಿಡ್ ಹೆಚ್ಚಳವಾಗಿತ್ತಿರುವ ಹಿನ್ನೆಲೆ. ಮೇ 4ರ ವರಗೆ ಸ್ವಯಂ ಪ್ರೇರಿತವಾಗಿ ಬಂದ್ ಮಾಡುವಂತೆ ವ್ಯಾಪಾರಿಗಳಿಗೆ ಪೊಲೀಸ್ ಇಲಾಖೆಯಿಂದ ಸೂಚನೆ ನೀಡಲಾಗಿದೆ. ಪೊಲೀಸ್ ಇಲಾಖೆಯ ಮನವಿ ಹಿನ್ನಲೆ ಮೈಸೂರಿನ ಕಮರ್ಷಿಯಲ್ ಸ್ಟ್ರೀಟ್ ನ ಬಹುತೇಕ ಅಂಗಡಿಗಳು ಬಂದ್ ಆಗಿದೆ.

ಈ ಕುರಿತು ಮಾತನಾಡಿರುವ  ಡಿಸಿಪಿ ಪ್ರಕಾಶ್ ಗೌಡ, ನಾಳೆ ಸಂಜೆ 6ಗಂಟೆಯಿಂದ ಸೋಮವಾರ ಬೆಳಗ್ಗೆ 6ರ ವರಗೆ ವೀಕೆಂಡ್ ಕರ್ಫ್ಯೂ ಇರಲಿದೆ. ಶನಿವಾರ -ಭಾನುವಾರ ಎರಡು ದಿನಗಳು ಮಾತ್ರ ವೀಕೆಂಡ್ ಕರ್ಫ್ಯೂ ಇರಲಿದೆ. ಮೆಡಿಕಲ್, ಮಾಂಸದಂಗಡಿ, ತರಕಾರಿ, ಹಣ್ಣು ಖರೀದಿಸುವವರಿಗೆ ಮಾತ್ರ ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಕಾಲಾವಕಾಶವಿರುತ್ತದೆ. ಮಾಂಸ ಮಾರಾಟಗಾರರು ಅಗತ್ಯಕ್ಕೂ ಹೆಚ್ಚು ಮಾಂಸ ಮಾರಾಟಕ್ಕೆ ಮುಂದಾಗಬಾರದು. ಕೇವಲ ನಿಗದಿತ ಸಮಯಕ್ಕಾಗುವಷ್ಟು ಮಾಂಸ ಮಾರಾಟಕ್ಕೆ ಮುಂದಾಗಿ.. ಅನಗತ್ಯ ಮಾಂಸ ಮಾರಾಟ ಮಾಡುವ ಮೂಲಕ ನಷ್ಟ ಅನುಭವಿಸದಿರಿ ಎಂದು ಸಲಹೆ ನೀಡಿದರು. Mysore - May 4- all –shop- bandh-DCP-Prakash gowda

ಹಾಗೆಯೇ  ಹೇರ್ ಸಲೂನ್ , ಬ್ಯುಟಿ ಪಾರ್ಲರ್ ಗಳು ವೀಕೆಂಡ್ ಕರ್ಫ್ಯೂ ನಲ್ಲಿ ಕಾರ್ಯನಿರ್ವಹಿಸುವಂತಿಲ್ಲ. ಬಾರ್. ರೆಸ್ಟೋರೆಂಟ್, ಹೋಟೆಲ್ ಗಳಲ್ಲಿ ಪರ್ಸಲ್ ಕಡ್ಡಾಯ ಎಂದು ಡಿಸಿಪಿ ಪ್ರಕಾಶ್ ಗೌಡ ಹೇಳಿದ್ದಾರೆ.

Key words:  Mysore – May 4- all –shop- bandh-DCP-Prakash gowda