Sunday, August 2, 2026

BDA Apartments

Home Front Page ನಾಳೆ ಮೈಸೂರು ವಿವಿಯಿಂದ ರಾಷ್ಟ್ರೀಯ ಶಿಕ್ಷಣ ನೀತಿ-2020 ಕುರಿತು ರಾಷ್ಟ್ರಮಟ್ಟದ ವಿಚಾರ ಸಮ್ಮೇಳನ

ನಾಳೆ ಮೈಸೂರು ವಿವಿಯಿಂದ ರಾಷ್ಟ್ರೀಯ ಶಿಕ್ಷಣ ನೀತಿ-2020 ಕುರಿತು ರಾಷ್ಟ್ರಮಟ್ಟದ ವಿಚಾರ ಸಮ್ಮೇಳನ

ಮೈಸೂರು,ಸೆಪ್ಟೆಂಬರ್,25,2020(www.justkannada.in) : ಮೈಸೂರು ವಿಶ್ವವಿದ್ಯಾನಿಲಯ ಶೈಕ್ಷಿಕ್ ಸಂಘ್ ವತಿಯಿಂದ ರಾಷ್ಟ್ರೀಯ ಶಿಕ್ಷಣ ನೀತಿ-2020 ಕುರಿತು ಸೆ.26ರಂದು ವಿಜ್ಞಾನಭವನದಲ್ಲಿ ರಾಷ್ಟ್ರಮಟ್ಟದ ಒಂದು ದಿನದ ವಿಚಾರ ಸಮ್ಮೇಳನವನ್ನು ಆಯೋಜಿಸಿದೆ.jk-logo-justkannada-logoಅಂದು ಬೆಳಗ್ಗೆ 11ಗಂಟೆಗೆ ಸಮ್ಮೇಳನವನ್ನು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಉದ್ಘಾಟಿಸುವರು. ಮುಖ್ಯಭಾಷಕಾರರಾಗಿ ಶಾಸಕ ಅರುಣ್ ಶಹಾಪುರ ಅವರು ಮಾತನಾಡಲಿದ್ದು, ಕರ್ನಾಟಕ ದಕ್ಷಿಣ(ಆರ್ ಎಸ್ ಎಸ್) ಸಂಘ ಚಾಲಕ ಮ.ವೆಂಕಟರಾಮು ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಾನೂನು ವಿಭಾಗ ಹಾಗೂ ಕಾನೂನು ಶಾಲೆ ಅಧ್ಯಕ್ಷ ಪ್ರೊ.ಸಿ.ಬಸವರಾಜು ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದಾರೆ.

key words : Tomorrow-National-Education-Policy-2020-Mysore Vivi-National-Level-Conference