ಬಿಡುಗಡೆ ವಿಚಾರದಲ್ಲಿ ನನ್ನ ಅನುಮತಿ ಇಲ್ಲದೆ ಮಾಹಿತಿ ಕೊಡಬೇಡಿ- ಜೈಲಾಧಿಕಾರಿಗಳಿಗೆ ಪತ್ರ ಬರೆದ ಶಶಿಕಲಾ‌ ನಟರಾಜನ್…

ಬೆಂಗಳೂರು, ಸೆಪ್ಟಂಬರ್, 25,2020(www.justkannada.in): ಅಕ್ರಮ ಆಸ್ತಿ ಗಳಿಕೆ‌ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿರುವ ಶಶಿಕಲಾ‌ ನಟರಾಜನ್ ಇದೀಗ ಜೈಲಾಧಿಕಾರಿಗಳಿಗೆ ಪತ್ರ ಬರೆದು ಬಿಡುಗಡೆ ವಿಚಾರದಲ್ಲಿ ನನ್ನ ಅನುಮತಿ ಇಲ್ಲದೆ ಯಾರಿಗೂ ಮಾಹಿತಿ ನೀಡಬೇಡಿ ಎಂದು ಮನವಿ ಮಾಡಿದ್ದಾರೆ.

ಅಕ್ರಮ ಆಸ್ತಿ ಗಳಿಕೆ‌ ಪ್ರಕರಣದಲ್ಲಿ ಶಶಿಕಲಾ ನಟರಾಜನ್  2017ರಲ್ಲಿ ನಾಲ್ಕು ವರ್ಷಗಳ ಸಜೆಗೆ ಗುರಿಯಾಗಿದ್ದು ಪರಪ್ಪನ ಅಗ್ರಹಾರದಲ್ಲಿ ಜೈಲು ಶಿಕ್ಷೆಗೆ ಅನುಭವಿಸುತ್ತಿದ್ದಾರೆ. ಶಶಿಕಲಾ ಅವರ ಜತೆ  ಸುಧಾಕರನ್, ಇಳವರಸಿ ಸಹ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.

ಈ ಸಂಬಂಧ ಇತ್ತೀಚೆಗೆ ಶಶಿಕಲಾ ಬಿಡುಗಡೆ ದಿನಾಂಕ ಕೋರಿ ಆರ್ ಟಿಐ ಕಾರ್ಯಕರ್ತ ನರಸಿಂಹಮೂರ್ತಿ ಅರ್ಜಿ ಹಾಕಿದ್ದರು. ಈ ಕುರಿತು ಮಾಹಿತಿ ನೀಡಿದ್ದ ಕಾರಾಗೃಹ ಇಲಾಖೆ, ಮುಂದಿನ ವರ್ಷ ಜ. 27 ರಂದು ಶಶಿಕಲಾ ನಟರಾಜನ್  ಬಿಡುಗಡೆಯಾಗಲಿದ್ದಾರೆ. ನ್ಯಾಯಾಲಯ ವಿಧಿಸಿದ್ದ 10 ಕೋಟಿ ರೂ. ದಂಡ ಕಟ್ಟದಿದ್ದರೆ 2022 ಜನವರಿಯಲ್ಲಿ ಶಶಿಕಲಾ ಬಿಡುಗಡೆ ಮಾಡುವುದಾಗಿ ತಿಳಿಸಿತ್ತು.do-not-release-information-any-person-imprisonment-sasikala-natarajan-letter-jail-officer

ಆದರೆ ಈ ಕುರಿತು ಸೆಪ್ಟಂಬರ್ 16 ರಂದು  ಜೈಲಾಧಿಕಾರಿಗಳಿಗೆ ಪತ್ರ ಬರೆದಿರುವ ಶಶಿಕಲಾ ನಟರಾಜನ್, ಬಿಡುಗಡೆ ವಿಚಾರದಲ್ಲಿ ನನ್ನ ಅನುಮತಿ ಇಲ್ಲದೆ ಯಾರಿಗೂ‌ ಮಾಹಿತಿ ಕೊಡಬೇಡಿ‌. ನನ್ನ ಬಗ್ಗೆಗಿನ ಮಾಹಿತಿ ತಿಳಿಸಬೇಡಿ ಎಂದು‌  ಮನವಿ ಮಾಡಿದ್ದಾರೆ.

Key words: Do not- release- information –any person- Imprisonment- Sasikala Natarajan- letter – jail officer