ಬಿಜೆಪಿ ಸರ್ಕಾರಕ್ಕೆ 9ತಿಂಗಳಷ್ಟೇ ಆಯಸ್ಸು: ಮುಂದೆ ಹೆಚ್.ಡಿಕೆ ಸಿಎಂ ಆಗ್ತಾರೆ- ಸಿಎಂ ಇಬ್ರಾಹಿಂ ವಿಶ್ವಾಸ.

ಮೈಸೂರು,ಮೇ,26,2022(www.justkannada.in): ಬಿಜೆಪಿ ಸರ್ಕಾರಕ್ಕೆ 9ತಿಂಗಳಷ್ಟೇ ಆಯಸ್ಸು. 9 ತಿಂಗಳ ಬಳಿಕ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರುತ್ತೆ. ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗ್ತಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ನುಡಿದರು.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಇಬ್ರಾಹಿಂ,  ಪರಿಷತ್ ಟಿಕೆಟ್ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಹೆಚ್.ಡಿ ದೇವೇಗೌಡರು, ನಾನು, ಹೆಚ್.ಡಿ ಕುಮಾರಸ್ವಾಮಿ ಚರ್ಚೆ ಮಾಡಿ ಟಿಕೆಟ್ ಕೊಟ್ಟಿದ್ದೇವೆ. ನಾನು ಯಾವುದೇ ಟಿಕೆಟ್ ಆಕಾಂಕ್ಷಿ ಅಲ್ಲ. ನಾನು ಬಡಿಸುವ ಸ್ಥಾನದಲ್ಲಿದ್ದೇನೆ. ಪಕ್ಷದ ಅಧ್ಯಕ್ಷನಾಗಿ ಕೊಡುವ ಕೆಲಸವಷ್ಟೇ ನನ್ನದು ಎಂದು ಹೇಳಿದರು.

ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣಾ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಇಬ್ರಾಹಿಂ,  ಜೆಡಿಎಸ್ ಗೆ ಉತ್ತಮ ವಾತಾವರಣ ಇದೆ. ಜೆಡಿಎಸ್ ಹಾಗೂ ಬಿಜೆಪಿ ನಡುವೆ ಪೈಪೋಟಿ ಇದೆ. ಆದರೆ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಇಲ್ಲ. ಎಲ್ಲಾ ಕಡೆ ಉತ್ತಮ ಅಭ್ಯರ್ಥಿಗಳನ್ನು ಹಾಕಿದ್ದೇವೆ. ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸ ಇದೆ ಎಂದರು.JDS- join- issue-CM Ibrahim- clarified.

ಬಿಜೆಪಿ ಸೋಲಿಸೋಕೆ ಆಗದ ಜೆಡಿಎಸ್ ಬಗ್ಗೆ ಮಾತನಾಡಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ಕುರಿತು ಟಾಂಗ್ ನೀಡಿದ ಸಿಎಂ ಇಬ್ರಾಹಿಂ,  ರಾಜ್ಯಕ್ಕೆ ಬಿಜೆಪಿಯನ್ನ ತ‌ಂದವರು ಯಾರು.? ಯಡಿಯೂರಪ್ಪನ ತಂದವರು ಯಾರು.? ಈಗ ನಮ್ಮ ಶಕ್ತಿ ಏನು ಅಂತ ಸಿದ್ದರಾಮಯ್ಯಗೆ ಗೊತ್ತಾಗ್ತಿದೆ‌. ನಮ್ಮ ಶಕ್ತಿ ಜಲಧಾರೆಯಾಗಿ ಪರಿವರ್ತನೆಯಾಗಿದೆ. ನಮ್ಮನ್ನ ಬಿಜೆಪಿಯ ಬಿ ಟೀಂ ಅಂತಿದ್ರು. ಬೆಂಗಳೂರಿನಲ್ಲಿ ಲಕ್ಷಾಂತರ ಜನ ಸೇರಿ ಜಲಧಾರೆ ಕಾರ್ಯಕ್ರಮ ಯಶಸ್ವಿಗೊಳಿಸಿದ್ರು. ಹಾಗಾಗಿ ನಾವೂ ಕೂಡಾ ಕಾಂಗ್ರೆಸ್ ಬಗ್ಗೆ ಮಾತನಾಡಲ್ಲ. ರಾಜ್ಯಾದ್ಯಂತ ಜೆಡಿಎಸ್ ಸಂಘಟನೆ ಮಾಡ್ತಿದ್ದೇವೆ ಎಂದರು.

ಮೊದಲು ಮುಂದಿನ ಬಾರಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಾ ಅಂತ ಪ್ರಶ್ನೆ ಹಾಕಿ.

ಮಳಲಿ ಮಸೀದಿ ಬಗ್ಗೆ ಅಷ್ಟಮಂಗಲ ಪ್ರಶ್ನೆ ವಿಚಾರ ಕುರಿತು ಲೇವಡಿ ಮಾಡಿದ ಸಿಎಂ ಇಬ್ರಾಹಿಂ, ಮೊದಲು ಮುಂದಿನ ಬಾರಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಾ ಅಂತ ಪ್ರಶ್ನೆ ಹಾಕಿ. ರಾಜ್ಯದಲ್ಲಿ ಏನಾಗುತ್ತೆ, ಮೋದಿ ಏನಾಗ್ತಾರೆ ಅಂತ ಪ್ರಶ್ನೆ ಹಾಕಿ ಎಂದು ಹೇಳಿದರು.

ಸಮಾಜದಲ್ಲಿ ಅಶಾಂತಿ ಸೃಷ್ಠಿಸಲು ಬಿಜೆಪಿ ಹೀಗೆ ಮಾಡ್ತಿದೆ. ಹಿಜಾಬ್, ಹಲಾಲ್ ಆಯ್ತು ಇಗೀದ ಮತ್ತೊಂದು ತಂದಿದ್ದಾರೆ. ಬಸವಣ್ಣನ ನಾಡಿನಲ್ಲಿ ಇದೆಲ್ಲದಕ್ಕೂ ಆಸ್ಪದ ಇಲ್ಲ. ಮುಮ್ಮಡಿ ಕೃಷ್ಣರಾಜ ಒಡೆಯರ್ ಮುಸ್ಲಿಂ ಹೆಣ್ಣುಮಕ್ಕಳಿಗೆ ಪರದೆಯ ಜಟಕಾಗಾಡಿ ನೀಡಿದ್ದರು. ಶಾಲೆಗೆ ಹೋಗಲು ಪರದೆ ಗಾಡಿಯನ್ನ ಬಳಸಲಾಗ್ತಿತ್ತು. ಇದು ಈ ಹುಚ್ಚು ಮುಂಡೆದು ಪ್ರತಾಪ್ ಸಿಂಹ‌ನಿಗೆ ಗೊತ್ತಿಲ್ಲ. ಮಂಗನಕೈಯಲ್ಲಿ ಮಾಣಿಕ್ಯ ಸಿಕ್ಕಿದ ಹಾಗಾಗಿದೆ. ಸಿದ್ದರಾಮಯ್ಯನ ತಪ್ಪಿನಿಂದ ಎರಡು ಬಾರಿ ಎಂಪಿ ಆಗಿದಾರೆ. ಈಗ ಟಿಪ್ಪುಸುಲ್ತಾನ್ ಗೂ ಕೃಷ್ಣರಾಜ ಒಡೆಯರ್ ಗೂ ತಂದಿಡುವ ಕೆಲಸ ಮಾಡ್ತಿದ್ದಾರೆ. ಶ್ರೀರಂಗಪಟ್ಟಣದ ಟಿಪ್ಪು ಸುಲ್ತಾನ್ ಶಾಸನ, ಸಮಾಧಿ ಇದೆ. ಅದನ್ನ ಕೃಷ್ಣರಾಜ ಒಡೆಯರ್ ಕಾಪಾಡಿಕೊಂಡು ಬಂದಿದ್ದರು‌. ರಾಜರಾಜರಲ್ಲಿ ಒಳ್ಳೆಯ ಸಂಬಂಧ ಇತ್ತು. ಕೃಷ್ಣರಾಜ ಒಡೆಯರ್ ಹಿಂದುಳಿದ ವರ್ಗಗಳಿಗೆ ಅನೇಕ ಕೊಡುಗೆ ನೀಡಿದ್ದಾರೆ. ಅವರನ್ನು ಕೂಡಾ ಸ್ಮರಿಸುವ ಕೆಲಸ ಮಾಡಬೇಕು ಎಂದು ಸಿಎಂ ಇಬ್ರಾಹಿಂ ತಿಳಿಸಿದರು.

Key words: BJP government -only 9 month- CM Ibrahim

ENGLISH SUMMARY…

BJP will for only 9 months more: HDK will become the CM – CM Ibrahim exudes confidence
Mysuru, May 26, 2022 (www.justkannada.in): “JDS State President C.M. Ibrahim today observed that the BJP government in the state will live for nine more months and JDS will come to power in the state after that.
Speaking to the media persons in Mysuru today, he informed that there is no confusion with respect to distribution of LC ticket. “Me, along with H.D.Kumaraswamy and H.D. Devegowda have given the ticket after discussing. I am not an aspirant. I am just a server. As the President of the party my duty is just to give,” he said.
In his response concerning the South Graduates’ Constituency elections, C.M. Ibrahim expressed his view that people like JDS. “There is a competition between the JDS and BJP. Congress don’t have an upper hand in the Graduates’ constituency. We have selected suitable candidates for all the seats and we are confident of winning more number of seats,” he added.
Keywords: JDS/ South Graduates’ Constituency/ ticket