Monday, October 12, 2026

Dasara Wishes

BJP DasraWishes_JK DasraWishes JK
Happy Dasara
Home Front Page ಸಿಎಂ , ಡಿಸಿಎಂ ಅನ್ಯೂನ್ಯವಾಗಿದ್ದಾರೆ : ಏನೇ ಕುತಂತ್ರ ಮಾಡಿದ್ರು ಡಿವೈಡ್ ಆಗಲ್ಲ- ಸಚಿವ ಚಲುವರಾಯಸ್ವಾಮಿ

ಸಿಎಂ , ಡಿಸಿಎಂ ಅನ್ಯೂನ್ಯವಾಗಿದ್ದಾರೆ : ಏನೇ ಕುತಂತ್ರ ಮಾಡಿದ್ರು ಡಿವೈಡ್ ಆಗಲ್ಲ- ಸಚಿವ ಚಲುವರಾಯಸ್ವಾಮಿ

ಮೈಸೂರು,ಜುಲೈ,4,2025 (www.justkannada.in): ನಮ್ಮ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಬಹಳ‌ ಅನ್ಯೂನ್ಯವಾಗಿದ್ದಾರೆ. ಯಾರು ಏನೇ ಕುತಂತ್ರ ಮಾಡಿದರೂ ಡಿವೈಡ್ ಆಗಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದರು.

ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಈ ನಾಡಿನ‌  ಎಲ್ಲಾ ರೈತರಿಗೆ ಒಳ್ಳೇ ಮಳೆ ಬೆಳೆಯಾಗಿದೆ. ಎಲ್ಲರಿಗೂ ಸಮೃದ್ದಿ ತರಲಿ ಎಂದು  ತಾಯಿಯಲ್ಲಿ ಕೇಳಿಕೊಂಡಿದ್ದೇನೆ ಎಂದರು.

ಸಿಎಂ ಬದಲಾವಣೆ ಕುರಿತು ಶಾಸಕರು ಬಹಿರಂಗ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಚಲುವರಾಯಸ್ವಾಮಿ, ಅದು ಅವರವರ ಅಭಿಪ್ರಾಯ ಹೇಳಿದ್ದಾರೆ. ನಮ್ಮ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಬಹಳ‌ ಅನೂನ್ಯವಾಗಿದ್ದಾರೆ. ಯಾರು ಏನೇ ಕುತಂತ್ರ ಮಾಡಿದ್ರು ಡಿವೈಡ್ ಆಗಲ್ಲ. ಪೂರ್ಣಾವಧಿ ಸಿಎಂ ಆಗಿ ಸಿದ್ದರಾಮಯ್ಯ ಅವರೇ ಮುಂದುವರಿಯಬೇಕಾ ಬೇಡವಾ ಎನ್ನುವುದನ್ನ ನಿರ್ಧಾರ ಮಾಡುವವರು ಹೈಕಮಾಂಡ್ ಎಂದರು.

ಕೇಂದ್ರ ಸಚಿವ ಹೆಚ್ ಡಿಕೆ ದಿಶಾ ಮೀಟಿಂಗ್ ನಲ್ಲಿ ನಾನು ಭಾಗಿಯಾಗಲ್ಲ

ಮಂಡ್ಯದಲ್ಲಿಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ದಿಶಾ ಮೀಟಿಂಗ್ ಮಾಡುತ್ತಿದ್ದಾರೆ. ನಾನು ಭಾಗಿಯಾಗಲ್ಲ. ಯಾಕೆಂದರೆ ನಾನು ಕೆಡಿಪಿ ಮೀಟಿಂಗ್ ಮಾಡುವಾಗ ಅವರು ಬಂದಿಲ್ಲ. ನಾನು ಕೂಡ ಇಂದು ಭಾಗವಹಿಸಲ್ಲ. ಅವರು ಏನು ಮಾಡಬೇಕೆಂದು ಮಾಡಲಿ. ಅವರಿಗೆ ಒಳ್ಳೆಯದಾಗಲಿ. ಅವರು ಏನು ಇಂಪ್ಲಿಮೆಂಟ್ ಮಾಡುತ್ತಾರೆ ಮಾಡಲಿ. ರಾಜ್ಯಕ್ಕೆ ಮತ್ತು ಕ್ಷೇತ್ರಕ್ಕೆ ಮಟ್ಟದ ಅನುದಾನ ತರಲಿ. ಇವರು ದೊಡ್ಡ ಮಂತ್ರಿ ಇದ್ದಾರೆ ಹೆಚ್ಚಿನ ಅನುದಾನ ತರಲಿ. ನೀರಾವರಿ, ಅಥವ ಕೈಗಾರಿಕೆ ಕ್ಷೇತ್ರಕ್ಕೆ ದೊಡ್ಡ ಅನುದಾನ ತರಲಿ ಎಂದು ಕೃಷಿ ಸಚಿವ ಚೆಲುವರಾಯ ಸ್ವಾಮಿ ಹೇಳಿದರು.vtu

Key words: Mysore, Chamundi hills, Minister, Chaluvarayaswamy