ಬೀದರ್,ಆಗಸ್ಟ್,26,2026 (www.justkannada.in): ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪಾದಯಾತ್ರೆಗೆ ಮುಂದಾಗಿರುವ ಬಗ್ಗೆ ಅರಣ್ಯ ಸಚಿವ ರಾಮಲಿಂಗರೆಡ್ಡಿ ಲೇವಡಿ ಮಾಡಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, ಬಿಜೆಪಿಯವರು ಬಿಡುವಾಗಿದ್ದಾರೆ. ಪಾದಯಾತ್ರೆ ಮಾಡಲಿ, ಆರೋಗ್ಯ ಚೆನ್ನಾಗಿರುತ್ತೆ. 100ರಿಂದ 200 ಕಿ.ಮೀ ನಡೆದರೇ ಆರೋಗ್ಯ ಸರಿಯಾಗಿರುತ್ತೆ ಎಂದು ಲೇವಡಿ ಮಾಡಿದರು.
ಬಿಜೆಪಿಯವರು ಮಾಡಲು ಹೊರಟಿರುವ ಪಾದಯಾತ್ರೆ ಒಂದು ಗಿಮಿಕ್. ಕೇಂದ್ರದ ಅದೆಷ್ಟೋ ಮಂತ್ರಿಗಳ ಮೇಲೆ ಆರೋಪಗಳಿವೆ. ನಮ್ಮ ರಾಜ್ಯ ಪ್ರತಿನಿಧಿಸುವ ಮಂತ್ರಿಗಳ ಮೇಲೂ ಆರೋಪಗಳು ಇವೆ. ಬಿಜೆಪಿಯವರು ಮೊದಲು ಅವರ ರಾಜೀನಾಮೆ ಕೇಳಲಿ. ಬಳಿಕ ಸಚಿವ ನಾಗೇಂದ್ರ ರಾಜೀನಾಮೆ ಕೇಳಲಿ ಎಂದು ತಿರುಗೇಟು ನೀಡಿದರು.
ಹನೂರು ಶೂಟೌಟ್ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಸಚಿವ ರಾಮಲಿಂಗರೆಡ್ಡಿ, ಚಾಮರಾಜನಗರದಲ್ಲಿ ಮೂರು ಬೇಟೆಗಾರರ ಎನ್‌ಕೌಂಟರ್ ಪ್ರಕರಣವನ್ನು ಈಗಾಗಲೇ ಸಿಐಡಿ ತನಿಖೆಗೆ ಆದೇಶಿಸಲಾಗಿದೆ. ಬೇಟೆಗಾರರ ಮೇಲೆ ನಾಲ್ಕು ಕೇಸ್‌ಗಳಿದ್ದವು ಎಂದರು.
Key words: Padayatre, improve, health, BJP, Minister, Ramalinga Reddy







