ಟೆಸ್ಟ್ ಕ್ರಿಕೆಟ್ ಗೆ ಡೇಲ್‌ ಸ್ಟೇನ್‌ ವಿದಾಯ

ಜೊಹಾನ್ಸ್‌ಬರ್ಗ್‌, ಆಗಸ್ಟ್ 06, 2019 (www.justkannada.in): ದಕ್ಷಿಣ ಆಫ್ರಿಕಾದ ಬೌಲರ್ ಡೇಲ್‌ ಸ್ಟೇನ್‌ ಟೆಸ್ಟ್‌ ಕ್ರಿಕೆಟಿಗೆ ವಿದಾಯ ಘೋಷಿಸಿದ್ದಾರೆ.

ಆದರೆ ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಮುಂದುವರಿಯುವುದಾಗಿ ಹೇಳಿದ್ದಾರೆ. 36ರ ಹರೆಯದ ಸ್ಟೇನ್‌ 2015ರಿಂದ ಭುಜದ ನೋವಿಗೆ ಸಿಲುಕಿದ ಬಳಿಕ ಸಂಪೂರ್ಣ ಫಿಟ್‌ನೆಸ್‌ಗೆ ಮರಳುವಲ್ಲಿ ವಿಫ‌ಲರಾಗಿದ್ದರು.

ಟೆಸ್ಟ್‌ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ಪರ ಸರ್ವಾಧಿಕ 439 ವಿಕೆಟ್‌ ಉರುಳಿಸಿದ ಹೆಗ್ಗಳಿಕೆ ಸ್ಟೇನ್‌ ಅವರದು.