ಅಭಿಮಾನಿಗಳಿಗೆ ಮನವಿ ರೂಪದ ವಾರ್ನಿಂಗ್ ಮಾಡಿದ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್

ಬೆಂಗಳೂರು, ಆಗಸ್ಟ್ 06, 2019 (www.justkannada.in): ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅಭಿಮಾನಿಗಳಿಗೆ ಮನವಿ ರೂಪದ ವಾರ್ನಿಂಗ್ ಮಾಡಿದ್ದಾರೆ!

ಕೆಜಿಎಫ್ ಗೆ ಅದ್ದೂರಿ ಸೆಟ್ ಹಾಕಲಾಗಿದ್ದು, ಅಭಿಮಾನಿಗಳು ವಿಡಿಯೋ ಹಾಗೂ ಫೋಟೋಗಳನ್ನು ಸೋಶಿಯಲ್ ಮಿಡೀಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಈ ಕುರಿತು ಪ್ರಶಾಂತ್ ನೀಲ್ ಮನವಿ ಮಾಡಿದ್ದಾರೆ. ಹಲವಾರು ದಿನಿಗಳಿಂದ ಚಿತ್ರಕ್ಕಾಗಿ ರಾತ್ರಿ ಹಗಲು ಎನ್ನದೆ ಕಷ್ಟಪಟ್ಟು ಶ್ರಮಿಸಿರುತ್ತಾರೆ. ಸೆಟ್ ನಲ್ಲಿರುವ ಫೋಟೋ ಹಾಗೂ ವಿಡಿಯೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದರೆ ನಮ್ಮ ಶ್ರಮಕ್ಕೆ ಬೆಲೆ ಎಲ್ಲಿ? ‘ದಯವಿಟ್ಟು ಯಾರೂ ಸೋಶಿಯಲ್ ಮಿಡಿಯಾದಲ್ಲಿ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳಬೇಡಿ ಎಂದು ಕೋರಿದ್ದಾರೆ.

ಈಗಾಗಲೇ ಶೇರ್ ಮಾಡಿರುವ ಅಕೌಂಟ್ ಗಳನ್ನು ಡಿಲೀಟ್ ಮಾಡಿಸಿದ್ದೇವೆ. ಅಂತಹದ್ದು ಕಂಡು ಬಂದಲ್ಲಿ ನಮಗೆ ಲಿಂಕ್ ಶೇರ್ ಮಾಡಿ’ ಎಂದು ಮನವಿ ಮಾಡಿದ್ದಾರೆ.