ಒಡನಾಡಿ ಸಂಸ್ಥೆಗೆ ಆಗಮಿಸಿ  ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಗೆ ಹುಟ್ಟಹಬ್ಬದ ಶುಭಕೋರಿದ ಜಿ.ಟಿ ದೇವೇಗೌಡ…

ಮೈಸೂರು,ಆ,6,2019(www.justkannada.in): ಇಂದು ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರ ಜನ್ಮದಿನವಾಗಿದ್ದು ಈ ಹಿನ್ನೆಲೆ ಮಾಜಿ ಸಚಿವ ಜಿ.ಟಿ ದೇವೇಗೌಡ ಬರ್ತಡೆ ವಿಶ್ ಮಾಡಿದರು.

ಮೈಸೂರಿನ ಒಡನಾಡಿಯಲ್ಲಿ ಸಂಸ್ಥೆಯಲ್ಲಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್  ಜನ್ಮದಿನ ಆಚರಿಸಿಕೊಂಡರು. ಒಡನಾಡಿ ಸಂಸ್ಥೆಗೆ ಆಗಮಿಸಿದ  ಮಾಜಿ ಸಚಿವ ಜಿ.ಟಿ.ದೇವೇಗೌಡ  ಶ್ರೀನಿವಾಸ್ ಪ್ರಸಾದ್ ಅವರಿಗೆ ಶಾಲು ಹಾಕಿ ಜನ್ಮದಿನದ ಶುಭಾಶಯ ತಿಳಿಸಿದರು.

ಈ ವೇಳೆ ಶ್ರೀನಿವಾಸ್ ಪ್ರಸಾದ್ ಹಾಗೂ ಜಿಟಿ ದೇವೇಗೌಡರು ಕೇಕ್ ಕತ್ತರಿಸಿ ಪರಸ್ಪರ ಸಿಹಿ ತಿನ್ನಿಸಿದರು. ಇವರಿಬ್ಬರ ಭೇಟಿ ತೀವ್ರ ಕುತೂಹಲ ಕೆರಳಿಸಿದೆ.

Key words: GT Deve Gowda- wishing -MP V Srinivas Prasad- birthday -mysore