ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ ಬ್ರೆಂಡಂನ್ ಮೆಕಲಂ

ಹೊಸದಿಲ್ಲಿ, ಆಗಸ್ಟ್ 06, 2019 (www.justkannada.in): ನ್ಯೂಜಿಲೆಂಡ್ ನ ಕ್ರಿಕೆಟಿಗ, ಮಾಜಿ ನಾಯಕ ಬ್ರೆಂಡಂನ್ ಮೆಕಲಂ ಎಲ್ಲಾ ಮಾದರಿಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ.

37 ಹರೆಯದ ಬ್ರೆಂಡಂನ್ ಮೆಕಲಂ ನ್ಯೂಜಿಲ್ಯಾಂಡ್ ಪರ 101 ಟೆಸ್ಟ್, 260 ಏಕದಿನ ಮತ್ತು 71 ಟಿ20 ಪಂದ್ಯಗಳನ್ನಾಡಿದ್ದಾರೆ.

ನ್ಯೂಜಿಲ್ಯಾಂಡ್ ನ ಅತೀ ಶ್ರೇಷ್ಟ ಆಟಗಾರರಾಗಿರುವ ಮೆಕಲಂ ಆಕರ್ಷಕವಾಗಿ ಬೌಂಡರಿಗಳನ್ನು ಬಾರಿಸುವುದರಲ್ಲಿ ಪ್ರಾವೀಣ್ಯತೆ ಹೊಂದಿದ್ದರು.

ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಸಿಕ್ಸರ್ ಬಾರಿಸಿದ್ದಾರೆ. ಅತೀ ವೇಗದ ಶತಕಗಳನ್ನು ದಾಖಲಿಸಿದ ಆಟಗಾರರ ಪಟ್ಟಿಯಲ್ಲಿ ಇವರ ಹೆಸರಿದೆ. ಮಾತ್ರವಲ್ಲದೇ ನ್ಯೂಜಿಲೆಂಡ್ ಪರ ತ್ರಿಶತಕ ದಾಖಲಿಸಿದ ಮೊದಲ ಕ್ರಿಕೆಟಿಗನೂ ಹೌದು.